ಬೆಂಗಳೂರು: ವಿಧಾನ ಪರಿಷತ್ ನ ಹಣಮಂತ ನಿರಾಣಿ, ಅರುಣ್ ಶಹಾಪುರ ಹಾಗೂ ಕೆ.ಟಿ ಶ್ರೀಕಂಠೇಗೌಡ ಸೇರಿದಂತೆ ಮೂವರು ಸದಸ್ಯರು ಇಂದು ನಿವೃತ್ತಿಯಾಗಲಿದ್ದಾರೆ. ಈ ಸ್ಥಾನಗಳ ಆಯ್ಕೆಗಾಗಿ ನಡೆದಂತ ಚುನಾವಣೆಯಲ್ಲಿ ಹಣಮಂತ ನಿರಾಣಿ ಮಾತ್ರ ಪುನರಾಯ್ಕೆಯಾಗಿದ್ದಾರೆ.

ಹೌದು.. ಇಂದು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದಂತ ಹಣಮಂತ ನಿರಾಣಿ, ಶಿಕ್ಷಕರ ಕ್ಷೇತ್ರದಿಂದ ಚುನಾವಯಿತರಾಗಿದ್ದಂತ ಅರುಣ್ ಶಹಾಪುರ, ಪದವೀಧರ ಕ್ಷೇತ್ರದಿಂದ ಚುನಾವಯಿತರಾಗಿದ್ದಂತ ಕೆ.ಟಿ ಶ್ರೀಕಂಠೇಗೌಡ ಅವರು ನಿವೃತ್ತಿಯಾಗಲಿದ್ದಾರೆ. ಇವರಲ್ಲಿ ಹಣಮಂತ ನಿರಾಣಿ ಮಾತ್ರ ಪುನರಾಯ್ಕೆಯಾಗಿದ್ದಾರೆ.

Rain in Karnataka: ರಾಜ್ಯಾಧ್ಯಂತ ಇನ್ನೂ ನಾಲ್ಕು ದಿನ ಮಳೆ, ಕರಾವಳಿಯಲ್ಲಿ 2 ದಿನ ಆರೆಂಜ್ ಅಲರ್ಟ್

ಇನ್ನೂ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಸದಸ್ಯ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿರುವುದರಿಂದ ಆ ಸ್ಥಾನ ತೆರವಾಗಿದೆ. ಈ ನಾಲ್ಕೂ ಸ್ಥಾನಗಳಿಗೆ ಇತ್ತೀಚಿಗೆ ಚುನಾವಣೆ ಕೂಡ ನಡೆಸಲಾಗಿತ್ತು. ಬಿಜೆಪಿಯಿಂದ ಬಸವರಾಜ ಹೊರಟ್ಟಿ, ಹಣಮಂತ ನಿರಾಣಿ ಆಯ್ಕೆಯಾಗಿದ್ದರೇ, ಕಾಂಗ್ರೆಸ್ ನಿಂದ ಪ್ರಕಾಶ್ ಹುಕ್ಕೇರಿ, ಮಧು ಜಿ ಮಾದೇಗೌಡ ಚುನಾಯಿತರಾಗಿದ್ದರು.

ಇದೀಗ ವಿಧಾನ ಪರಿಷತ್ ನಲ್ಲಿ ಪಕ್ಷಗಳ ಬಲಾಬಲದಲ್ಲಿ ವತ್ಯಾಸವಾಗಿದ್ದು, ಆಡಳಿತಾರೂಡ ಬಿಜೆಪಿ ಸಭಾಪತಿ ಸೇರಿ 38, ಕಾಂಗ್ರೆಸ್ 28 ಹಾಗೂ ಜೆಡಿಎಸ್ 8 ಸ್ಥಾನಗಳನ್ನು ಹೊಂದಿದೆ. ಒಬ್ಬ ಪಕ್ಷೇತರು ಕೂಡ ಇದ್ದಾರೆ.

2,800 ಅಗ್ನಿವೀರರ ನೇಮಕಾತಿಗೆ ನೌಕಾಪಡೆಯಿಂದ ಅಧಿಸೂಚನೆ: ಜುಲೈ.15ರಿಂದ ಅರ್ಜಿ ಸಲ್ಲಿಕೆ ಆರಂಭ

ಬಿಜೆಪಿ ಮೇಲ್ಮನೆಯಲ್ಲಿ ಬಹುಮತ ಪಡೆಯುವದರಿಂದ ಖಾಲಿ ಇರುವ ಸಭಾಪತಿ, ಉಪಸಭಾಪತಿ ಸ್ಥಾನಗಳನ್ನು ಸುಲಭವಾಗಿ ಪಡೆಯಲಿದೆ. ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿ ಮುಂದುವರೆಯಲಿದೆ.

Share.
Exit mobile version