ಜಬಲ್ಪುರ: ದೆಹಲಿಯಲ್ಲಿ ಶ್ರದ್ಧಾಳ ಕೊಲೆ ಪ್ರಕರಣ ಮಾಸುವ ಮುನ್ನವೇ, ಮಧ್ಯಪ್ರದೇಶದಲ್ಲಿ ಮತ್ತೊಂದು ಭೀಕರ ಹತ್ಯೆಯ ಸುದ್ದಿ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ರೆಸಾರ್ಟ್ನಲ್ಲಿ ಯುವತಿಯೊಬ್ಬಳ ಕತ್ತು ಸೀಳಿ ಕೊಂದಿದ್ದು, ಆಕೆಯ ಮೃತದೇಹದ ಜೊತೆ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೇ, ಆ ವಿಡಿಯೋವನ್ನು ತಾನೇ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾನೆ.
ಘಟನೆ ನಡೆದು ಒಂದು ವಾರ ಕಳೆದಿದ್ದರೂ, ಶಿಲ್ಪಾ ಝರಿಯಾ (25) ಎಂಬಾಕೆಯನ್ನು ಕತ್ತು ಸೀಳಿ ಕೊಲೆ ಮಾಡಿರುವುದಾಗಿ ಹೇಳಿರುವ ಅಭಿಜಿತ್ ಪಾಟಿದಾರ್ಗಾಗಿ ಪೊಲೀಸರು ಇನ್ನೂ ಹುಡುಕಾಟ ನಡೆಸುತ್ತಿದ್ದಾರೆ. ಜಬಲ್ಪುರದ ಮೇಖ್ಲಾ ರೆಸಾರ್ಟ್ನಲ್ಲಿರುವ ಕೊಠಡಿಯಿಂದ ಸಂತ್ರಸ್ತೆಯ ರಕ್ತಸಿಕ್ತ ದೇಹವನ್ನು ವಶಪಡಿಸಿಕೊಳ್ಳಲಾಗಿದೆ.
ಅಭಿಜಿತ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆಘಾತಕಾರಿ ವೀಡಿಯೊದಲ್ಲಿ, ʻಯಾರೂ ಕೂಡ ನಂಬಿಕೆಗೆ ದ್ರೋಹ ಮಾಡಬೇಡಿʼಎಂದು ಅಭಿಜಿತ್ ಆಕ್ರೋಶದಿಂದ ಹೆಣದೊಂದಿಗೆ ವಿಡಿಯೋ ಮಾಡಿದ್ದಾನೆ. ಈ ವೇಳೆ ಹಾಸಿಗೆ ಮೇಲಿದ್ದ ಯುವತಿಯ ಮೃತದೇಹವನ್ನೂ ಸಹ ತೋರಿಸಿದ್ದು, ಆಕೆಯ ಗಂಟಲು ಸೀಳಿರುವುದು ಕಂಡುಬಂದಿದೆ.
ಮೂಲಗಳ ಪ್ರಕಾರ, ಪಾಟ್ನಾದ ವ್ಯಾಪಾರಿಯಾಗಿರುವ ಅಭಿಜಿತ್ನ ಗೆಳೆಯ ಜಿತೇಂದ್ರ ಕುಮಾರ್ ಜೊತೆ ಯುವತಿ ಅಕ್ರಮ ಸಂಬಂಧ ಹೊಂದಿದ್ದಳು ಎಂದು ತಿಳಿದುಬಂದಿದೆ.
ಯುವತಿ ಜಿತೇಂದ್ರ ಅವರಿಂದ ಸುಮಾರು ₹ 12 ಲಕ್ಷ ಸಾಲ ಪಡೆದು ಜಬಲ್ಪುರಕ್ಕೆ ಪರಾರಿಯಾಗಿದ್ದಳು ಎಂದು ಅಭಿಜಿತ್ ಹೇಳಿಕೊಂಡಿದ್ದಾರೆ. ಜಿತೇಂದ್ರನ ಸೂಚನೆ ಮೇರೆಗೆ ಮಹಿಳೆಯನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.
SHOCKING NEWS: ಉತ್ತರ ಪ್ರದೇಶದಲ್ಲಿ ಮಹಿಳೆಯ ರುಂಡವಿಲ್ಲದ, ತುಂಡರಿಸಿದ ದೇಹದ ಭಾಗಗಳು ಬಾವಿಯಲ್ಲಿ ಪತ್ತೆ
BIG NEWS: ದೇಶದಲ್ಲಿ ʻಏಕರೂಪ ನಾಗರಿಕ ಸಂಹಿತೆʼ ಜಾರಿಗೆ ತರಲು ಬಿಜೆಪಿ ಬದ್ಧ: ಕೇಂದ್ರ ಗೃಹ ಸಚಿವ ಅಮಿತ್ ಶಾ
SHOCKING NEWS: ಉತ್ತರ ಪ್ರದೇಶದಲ್ಲಿ ಮಹಿಳೆಯ ರುಂಡವಿಲ್ಲದ, ತುಂಡರಿಸಿದ ದೇಹದ ಭಾಗಗಳು ಬಾವಿಯಲ್ಲಿ ಪತ್ತೆ