ರಾಜಸ್ಥಾನ: ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಗುರುವಾರ ಬೈಕ್ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿದ್ದು, ಮತ್ತೊಬ್ಬ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಹತ್ಯೆಯ ವಿರುದ್ಧ ಜನರು ಬೀದಿಗಿಳಿದಿದ್ದು, ಪೊಲೀಸರು ಇಂಟರ್ನೆಟ್ ಸೇವೆಗಳನ್ನು 48 ಗಂಟೆಗಳ ಕಾಲ ಸ್ಥಗಿತಗೊಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಮೃತನನ್ನು ಇಬ್ರಾಹಿಂ ಪಠಾಣ್ ಅಲಿಯಾಸ್ ಭೂರಾ ಮತ್ತು ಗಾಯಗೊಂಡವನನ್ನು ಇಮಾಮುದ್ದೀನ್ ಅಲಿಯಾಸ್ ಟೋನಿ ಎಂದು ಗುರುತಿಸಲಾಗಿದೆ.
ಗುರುವಾರ ಮುಂಜಾನೆ 4.30ರ ಸುಮಾರಿಗೆ ಹರ್ನಿ ಮಹಾದೇವ್ ಪ್ರದೇಶದ ಕಡೆಗೆ ಟೋನಿ ಮತ್ತು ಭೂರಾ ಹೋಗುತ್ತಿದ್ದಾಗ ಎರಡು ಬೈಕ್ಗಳಲ್ಲಿ ಬಂದ ನಾಲ್ವರು ಅವರ ಮೇಲೆ ಗುಂಡು ಹಾರಿಸಿದ್ದಾರೆ.
ಗುಂಡು ಹಾರಿಸಿದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರನ್ನೂ ಮಹಾತ್ಮಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಇಬ್ರಾಹಿಂ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು. ಇನ್ನೂ, ಘಟನೆಯಲ್ಲಿ ಗಾಯಗೊಂಡ ಟೋನಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇಬ್ಬರು ಬಲಿಪಶುಗಳು ಆದರ್ಶ್ ತಪಾಡಿಯಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಸಾಹಿಲ್ ಮನ್ಸೂರಿಯೊಂದಿಗೆ ಸಂಬಂಧ ಹೊಂದಿದ್ದರಿಂದ ಇದು ಪ್ರತೀಕಾರದ ಕೊಲೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ತಪಾಡಿಯಾ ಅವರನ್ನು ಕೊಲ್ಲಲಾಯಿತು. ಇದು ಈ ಪ್ರದೇಶದಲ್ಲಿ ಅಶಾಂತಿಗೆ ಕಾರಣವಾಯಿತು.
ಮಾಧ್ಯಮಗಳೊಂದಿಗೆ ಮಾತನಾಡಿದ ಅಜ್ಮೀರ್ ಶ್ರೇಣಿಯ ಐಜಿಪಿ ರೂಪಿಂದರ್ ಸಿಂಗ್, ಮೇಲ್ನೋಟಕ್ಕೆ ಇದು ಸೇಡಿನ ಕ್ರಮವಾಗಿ ಕಾಣುತ್ತದೆ. ಮೃತರು ಆದರ್ಶ್ ತಪಾಡಿಯಾ ಕೊಲೆ ಪ್ರಕರಣದ ಆರೋಪಿಯ ಸೋದರ ಸಂಬಂಧಿ ಎಂದು ತಿಳಿಸಿದ್ದಾರೆ.
ಬ್ಯಾಂಕ್ ಗ್ರಾಹಕರೇ ಗಮನಿಸಿ : ಇಲ್ಲಿದೆ ಡಿಸೆಂಬರ್ ತಿಂಗಳ ಬ್ಯಾಂಕ್ ರಜೆ ದಿನಗಳ ಪಟ್ಟಿ|Bank Holidays December 2022
ಚಂದ್ರನ ಮೇಲ್ಮೈಯ ಅದ್ಭುತ ಚಿತ್ರಗಳನ್ನು ಸೆರೆಹಿಡಿದ ನಾಸಾದ ʻಆರ್ಟೆಮಿಸ್ Iʼ