ದಾಮೋಹ್(ಮಧ್ಯಪ್ರದೇಶ): ಯುವಕನೊಬ್ಬ ನಗ್ನವಾಗಿ ವಿದ್ಯುತ್ ತಂತಿಗಳ ಮೇಲೆ ಸ್ಟಂಟ್ ಮಾಡಿರುವ ಘಟನೆ ಮಧ್ಯಪ್ರದೇಶದ ಶಹಜಾದ್ಪುರ ಗ್ರಾಮದಲ್ಲಿ ನಡೆದಿದೆ. ಇದರ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಈ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಯುವಕನನ್ನು ಬರ್ಖೇಡಾ ಗ್ರಾಮದ ನಿವಾಸಿ ಹರನಾಥ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಮಾನಸಿಕ ಅಸ್ವಸ್ಥ ಎಂದು ಕುಟುಂಬ ತಿಳಿಸಿದೆ. ಹರನಾಥ್ ಅನ್ನು ಕುಟುಂಬವು ಕುಟುಂಬವು ಛತ್ತರ್ಪುರದ ಬಾಗೇಶ್ವರ ಧಾಮಕ್ಕೆ ಕರೆದೊಯ್ದು ಮನೆಗೆ ಹಿಂದಿರುಗುತ್ತಿದ್ದಾಗ ದಾರಿಯಲ್ಲಿ ವಿದ್ಯುತ್ ಕಂಬವೇರಿ ವಿದ್ಯುತ್ ತಂತಿಗಳ ಮೇಲೆ ಸ್ಟಂಟ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
#दमोह: एक युवक ने निर्वस्त्र होकर बिजली के तारों पर झुलते हुए करतब दिखाए। समझाइश के बाद युवक नीचे उतरा। मामला दमोह के बटियागढ़ ब्लॉक के शाहजादपुरा का बताया जा रहा है। देखें #वायरल_वीडियो#MPNews #Stunt #PeoplesUpdate pic.twitter.com/oDaUq3S6eI
— Peoples Samachar (@psamachar1) October 19, 2022
ಅದೃಷ್ಟವಶಾತ್ ಘಟನೆ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಯುವಕನ ಕೃತ್ಯದಿಂದ ವಿಚಲಿತರಾದ ಕುಟುಂಬಸ್ಥರು ಘಟನೆಯ ಬಗ್ಗೆ ವಿದ್ಯುತ್ ಇಲಾಖೆ ಹಾಗೂ ಬಟಿಯಾಗಢ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕರನ್ನು ವಿದ್ಯುತ್ ತಂತಿಯಿಂದ ಕೆಳಗಿಳಿಸಿದ್ದಾರೆ.
Teacher Jobs Alert: ಶಿಕ್ಷಕರು ಬೇಕಾಗಿದ್ದಾರೆ, ಈ ಕೂಡಲೇ ಸಂಪರ್ಕಿಸಿ
BIGG NEWS: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಬೆದರಿಕೆ ಪ್ರಕರಣ; ಸಿಐಡಿ ತನಿಖೆ ಆರಂಭ