ಹುಬ್ಬಳ್ಳಿ : ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ಮೊಬೈಲ್ ಎಂಬ ಮಾಯಾಲೋಕಕ್ಕೆ ಒಗ್ಗಿಕೊಂಡು ಪ್ರಪಂಚವನ್ನೇ ಮರೆಯುತ್ತಿದ್ದಾರೆ. ಅದರ ಜೊತೆಗೆ ತಮ್ಮ ಪ್ರಾಣಕ್ಕೂ ಕೂಡ ಕುತ್ತು ತಂದುಕೊಳ್ಳುತ್ತಿದ್ದಾರೆ. ಇದೀಗ ಹುಬ್ಬಳ್ಳಿಯಲ್ಲಿ ಆನ್ಲೈನ್ ಗೇಮಿಂಗ್ ವ್ಯಾಮೋಹಕ್ಕೆ ಯುವಕನೊಬ್ಬ ಹಣ ಕಳೆದುಕೊಳ್ಳುವುದಷ್ಟೇ ಅಲ್ಲದೆ ಆತ್ಮಹತ್ಯೆಗೆ ಶರಣಾಗಿ ತನ್ನ ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾನೆ.
ಹೌದು ನೇಣಿಗೆ ಶರಣಾದ ಯುವಕನು ಆನ್ಲೈನ್ ಗೇಮ್ ವ್ಯಾಮೋಹಕ್ಕೆ ಸಿಲುಕಿ ಯುವಕ ಪ್ರಾಣ ಕಳೆದುಕೊಂಡಿದ್ದಾನೆ.ಮೃತ ಯುವಕನನ್ನು ರಾಕೇಶ್ ಶ್ರೀಶೈಲ್ ಜಂಬಲದಿನ್ನಿ (21) ಎಂದು ತಿಳಿದುಬಂದಿದೆ. ರಾಕೇಶ್ ಶ್ರೀಶೈಲ್ ಜಂಬಲದಿನ್ನಿ ಬಿವಿಬಿ ಕಾಲೇಜಿನಲ್ಲಿ ಬಿಇ 6ನೇ ಸೆಮಿಸ್ಟರ್ನಲ್ಲಿ ಓದುತ್ತಿದ್ದನು ಎನ್ನಲಾಗುತ್ತಿದೆ.
ರಾಕೇಶ್ ಪ್ರತಿದಿನವೂ ಆನ್ಲೈನ್ ಗೇಮ್ ಆಡುತ್ತಿದ್ದನು. ಆನ್ಲೈನ್ ಗೇಮ್ನಿಂದ ಹಣ ಕಳೆದುಕೊಂಡಿದ್ದ ರಾಕೇಶ್ ಮನನೊಂದು ತಾನು ಇದ್ದ ಕೋಣೆಯ ಫ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.