ಬೆತುಲ್ (ಮಧ್ಯಪ್ರದೇಶ): ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲ್ಲಲು ಕಬ್ಬಿಣದ ಬಾಗಿಲಿಗೆ ವಿದ್ಯುತ್ ತಂತಿಯನ್ನು ಹಾಕಿದ್ದ. ಆದರೆ, ಅವನ 55 ವರ್ಷದ ಅತ್ತೆ ಬಾಗಿಲಿನ ಸಂಪರ್ಕಕ್ಕೆ ಬಂದ ಪರಿಣಾಮ ಆಕೆ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ಆರೋಪಿ ವ್ಯಕ್ತಿಯು ಹೆಚ್ಚು ಮದ್ಯಪಾನ ಮಾಡುತ್ತಿದ್ದ. ಇದು ಆಗಾಗ್ಗೆ ಪತ್ನಿಯೊಂದಿಗೆ ಜಗಳಕ್ಕೆ ಕಾರಣವಾಗುತ್ತಿತ್ತು. ಭಾನುವಾರ ರಾತ್ರಿ ದಂಪತಿಗಳು ಮತ್ತೆ ಇದೇ ವಿಷಯಕ್ಕೆ ಜಗಳವಾಡಿದ್ದಾರೆ. ಇದಾದ ಬಳಿಕ ಹೆಂಡತಿ ತನ್ನ ತಾಯಿಯ ಮನೆಗೆ ಹೋಗಿದ್ದಳು.
ತನ್ನ ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಕೋಪಗೊಂಡ ವ್ಯಕ್ತಿ ತನ್ನ ಅತ್ತಿಗೆಯ ಮನೆಗೆ ಹೋಗಿದ್ದು, ಅಲ್ಲಿ ಕಬ್ಬಿಣದಿಂದ ಮಾಡಿದ ಬಾಗಿಲಿಗೆ ವಿದ್ಯುತ್ ತಂತಿ ಜೋಡಿಸಿ ಪತ್ನಿಯನ್ನು ಕೊಲ್ಲಲು ಯತ್ನಿಸಿದ್ದಾನೆ. ಆದ್ರೆ, ಅವನ ಅತ್ತೆ ಬಾಗಿಲನ್ನು ಮುಟ್ಟಿದ್ದು, ವಿದ್ಯುತ್ ಶಾಕ್ನಿಂದಾಗಿ ಆಕೆ ಅಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಳಿಕ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದು, ಆತನನ್ನು ಹಿಡಿಯುವ ಪ್ರಯತ್ನ ಮುಂದುವರಿದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
BREAKING NEWS : ಹಿರಿಯ ನಟ ಲೋಹಿತಾಶ್ವ ಆರೋಗ್ಯ ಸ್ಥಿತಿ ಗಂಭೀರ | Actor Lohithaswa