ಕೋಲಾರ: ಪೇಟೆಗೆ ಕರೆದುಕೊಂಡು ಬಂದು ಲಾರಿಗೆ ತಳ್ಳಿ ಪತ್ನಿಯನ್ನು ಪತಿ ಕೊಲೆ ಮಾಡಿರುವ ಘಟನೆ ಚಿಂತಾಮಣಿಯಲ್ಲಿ ನಡೆದಿದೆ. ಸಾವನ್ನಪ್ಪಿರುವ ಮಹಿಳೆಯನ್ನು ಸುಮೇರಾ ಅಂತ ಗುರುತಿಸಲಾಗಿದೆ.
ಸುಮೇರಾಳ ಗಂಡ ಮುನಿಕೃಷ್ಣ ಕೊಲೆ ಮಾಡಿರುವ ಆರೋಪಿಯಾಗಿದ್ದು, ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತಿತ್ತು ಎನ್ನಲಾಗಿದೆ. ಈ ನಡುವೆ ತನ್ನ ಹೆಂಡ್ತಿಯನ್ನು ಪೇಟೆಗೆ ಹೋಗೋಣ ಅಂತ ನಂಬಿಸಿ ಕರೆದುಕೊಂಡು ಬಂದ ಮುನಿಕೃಷ್ಣ ಕುಡಿದ ಮತ್ತಿನಲ್ಲಿ ನಗರದ ಸುಖ ಸಾಗರ್ ಹೋಟೆಲ್ ಬಳಿ ಇಬ್ಬರು ನಡೆದು ಕೊಂಡು ಹೋಗುತ್ತಿದ್ದ ವೇಳೇಯಲ್ಲಿ ಹಿಂದೆ ಬರುತ್ತಿದ್ದ ಲಾರಿಯನ್ನು ಗಮನಿಸಿ ಸುಮೇರಳನ್ನು ಲಾರಿ ಕೆಳಗೆ ತಳಿದ್ದಾನೆ ಎನ್ನಲಾಗಿದೆ. ಸುಮೇರ ಲಾರಿ ಕೆಳಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದಾಳೆ. ಘಟನ ಸ್ಥಳಕ್ಕೆ ಆಗಮಿಸಿದ ಚಿಂತಾಮಣಿ ಪೋಲಿಸರು, ಸಮೀಪದ ಸಿಸಿಟಿವಿ ದೃಶ್ಯವಾಳಿಗಳನ್ನು ಪರಿಶೀಲನೆ ಮಾಡಿದ ವೇಳೇಯಲ್ಲಿ ಇದೊಂದು ಕೊಲೆ ಅಂತ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿ ಮುನಿಕೃಷ್ಣನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.