ಬೆಂಗಳೂರು : ತನ್ನ ಪ್ರೀತಿಯನ್ನು ನಿರಾಕರೀಸಿದ್ದ ಹಿನ್ನೆಲೆಯಲ್ಲಿ ಬಾಲಕಿಯನ್ನ ಕೊಂದು ಮಣ್ಣಲ್ಲಿ ಹೂತು ಹಾಕಿದ ಯುವಕ, ನಂತರ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಬೆಂಗಳೂರು ನಗರದ ಹೊಸಕೋಟೆ ಎಂಬಲ್ಲಿ ಈ ಘಟನೆ ನಡೆದಿದೆ.
ಬರಗೂರು ನಿವಾಸಿ ನಿತಿನ್ (23) ಎಂಬಾತ ಕೊಲೆ ಮಾಡಿದ ಪಾಗಲ್ ಪ್ರೇಮಿ. 2 ದಿನಗಳ ಹಿಂದೆ ಕಾಣೆಯಾ ಗಿದ್ದ 15 ವರ್ಷದ ಬಾಲಕಿ ತಾಲೂಕಿನ ಅನುಗೊಂಡನ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವ ಪತ್ತೆಯಾಗಿದೆ.ಕೋಲಾರಜಿಲ್ಲೆ ಮಾಲೂರು ತಾಲೂಕಿನ ದೊಮ್ಮಲೂರು ಗ್ರಾಮದ ಬಾಲಕಿ ಕೊಲೆಯಾದ ನತದೃಷ್ಟೆ.
20 ದಿನಗಳ ಹಿಂದೆ ಶಾಲೆಗೆ ಹೋಗುತ್ತಿ ದ್ದಾಗ ನಿತಿನ್ ಬಾಲಕಿಗೆ ಚುಡಾಯಿಸಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ನಿತಿನ್ ಬಾಲಕಿ ಮೇಲೆ ಹಲ್ಲೆ ಮಾಡಿದ್ದ. ಈ ವಿಚಾರ ಬಾಲಕಿಯು ಪೋಷಕರಿಗೆ ತಿಳಿಸಿ ಮಾಲೂರು ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ
ಎರಡು ಗ್ರಾಮದವರು ಪರಸ್ಪರ ಮಾತು ಕತೆಯಿಂದ ರಾಜಿ ಮಾಡಿಕೊಂಡಿದ್ದರು. ಇದಾದ ಮೂರು ದಿನದ ಬಳಿಕ ನಂದಿನಿ ನಾಪತ್ತೆಯಾಗಿದ್ದು, ಹೊಸ ಕೋಟೆ ತಾಲೂಕಿನ ಬಾಣಾರ ಹಳ್ಳಿ ಬಳಿ ಶವವಾಗಿ ಪತ್ತೆಯಾ ಗಿದ್ದಳು. ಬಾಲಕಿ ಹಿಂದೆ ಬಿದ್ದಿದ್ದ ನಿತಿನ್ ಆಕೆಯನ್ನು ಕೊಲೆಗೈದಿರುವ ಬಗ್ಗೆ ಪೊಲೀ ಸರಿಗೆ ಮಾಹಿತಿ ಸಿಕ್ಕಿದೆ. ಆತನೂ ಕತ್ತು ಕುಯ್ದು ಕೊಂಡು ಆತ್ಮಹತ್ಯೆಗೆ ಯತ್ನಿಸಿ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಾ ಗಿದ್ದು, ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.