ಚಿಕ್ಕಮಗಳೂರು : ನಗರದಲ್ಲಿ ಕಾಡಾನೆ ದಾಳಿಗೆ ಕಾರ್ಮಿಕನೊಬ್ಬ ಬಲಿಯಾಗಿದ್ದು, ಸಿಟ್ಟಿಗ್ಗೆದ್ದ ಮಲೆನಾಡು ಜನರು ಆತನ ಮೃತದೇಹ ವಿಟ್ಟು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Breaking News: ಮಂಡ್ಯದಲ್ಲಿ ಮೂಡಾ ಹಗರಣ; ಐವರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ, 5 ಕೋಟಿ ದಂಡ
ಕಾಡಾನೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ನಿನ್ನೆ ಕೆಲಸದಿಂದ ಮನೆಗೆ ತೆರಳುವ ಸಂದರ್ಭದಲ್ಲಿ ಕಾಡಾನೆ ದಾಳಿ ಸ್ಥಳದಲ್ಲಿ 45 ವರ್ಷ ಅರ್ಜುನ್ ಕೂಲಿ ಕಾರ್ಮಿಕ ಸಾವನ್ನಪ್ಪಿದ್ದಾನೆ. ಸಿಟ್ಟಿಗೆದ್ದ ಜನರು ಪೊಲೀಸ್ ವಾಹನ ಪಲ್ಟಿ ಮಾಡೋದಕ್ಕೆ ಮುಂದಾಗಿದ್ದು, ಘಟನಾ ಸ್ಥಳದಲ್ಲಿ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.
Breaking News: ಮಂಡ್ಯದಲ್ಲಿ ಮೂಡಾ ಹಗರಣ; ಐವರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ, 5 ಕೋಟಿ ದಂಡ
ಇಂತಹ ಘಟನೆ ಇದೇ ಮೊದಲಲ್ಲ. ಕಾಡಾನೆ ದಾಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆ ಮುಂದಾಗುತ್ತಿಲ್ಲ. ಜತೆ ಅಧಿಕಾರಿಗಳು ಕೂಡಾ ತಲೆಗೆಡಿಸಿಕೊಳ್ಳುತ್ತಿಲ್ಲ. ಪ್ರತಿ ವರ್ಷ ಹತ್ತಾರು ಜನರು ಕಾಡಾನೆ ದಾಳಿಗೆ ಬಲಿಯಾಗುತ್ತಲೇ ಇದ್ದಾರೆ. ಯಾರು ಕೂಡಾ ಈ ಬಗ್ಗೆ ಗಮನ ಹರಿಸುತ್ತಿಲ್ಲ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.