ಪಶ್ಚಿಮ ಬಂಗಾಳ : ದೆಹಲಿ ಶ್ರದ್ಧಾ ವಾಕರ್ ಭೀಕರ ಹತ್ಯೆಯನ್ನು ನೆನಪಿಸುವ ಘಟನೆಯೊಂದು ಪಶ್ವಿಮ ಬಂಗಾಳದಲ್ಲಿ ನಡೆದಿದೆ. ಮಾಜಿ ನೌಕಾಪಡೆಯ ವ್ಯಕ್ತಿಯನ್ನು ಆತನ ಮಗನೇ ಕೊಲೆಗೈದು ದೇಹವನ್ನು ಕತ್ತರಿಸಿ ಬಂಗಾಳದ ವಿವಿಧ ಸ್ಥಳಗಳಲ್ಲಿ ಎಸೆದಿದ್ದಾನೆ.
ಮೃತ ವ್ಯಕ್ತಿಯನ್ನು ದಕ್ಷಿಣ 24 ಪರಗಣದ ಬರುಯಿಪುರ ನಿವಾಸಿ ಉಜ್ಜಲ್ ಚಕ್ರವರ್ತಿ (55) ಎಂದು ಗುರುತಿಸಲಾಗಿದ್ದು, ಅವರ ಪತ್ನಿ ಮತ್ತು ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ವ್ಯಕ್ತಿ ನಿರಂತರವಾಗಿ ಚಿತ್ರಹಿಂಸೆ ನೀಡುತ್ತಿದ್ದ ಎಂದು ಆರೋಪಿಗಳು ಹೇಳಿದ್ದಾರೆ ಎಂದು ಬರುಯಿಪುರ್ ಪೊಲೀಸ್ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ಹೇಳಿದ್ದಾರೆ.
ಏನಿದು ಘಟನೆ ?
ನವೆಂಬರ್ 12 ರಂದು ಕಾಲೇಜು ಪರೀಕ್ಷೆಗೆ ಹಣಕ್ಕಾಗಿ ಚಕ್ರವರ್ತಿ ಮತ್ತು ಅವರ ಮಗ ನಡುವೆ ಜಗಳವಾಡಿದ್ದರು. ಪರೀಕ್ಷೆಗೆ ಬೇಕಾಗಿದ್ದ 3000 ರೂ. ಕೊಡಲು ನಿರಾಕರಿಸಿದ್ದ ಅಪ್ಪ ಮಗನಿಗೆ ಕಪಾಳಮೋಕ್ಷ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ಮಗ ತಂದೆಯನ್ನು ತಳ್ಳಿದ್ದನು. ಪರಿಣಾಮ ಚಕ್ರವರ್ತಿ ಕುರ್ಚಿಗೆ ತಲೆ ಬಡಿದು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಬಳಿಕ ಮಗ ತಂದೆಯ ಕತ್ತು ಸಿಲುಕಿ ಕೊಂದಿದ್ದನು.
ಚಕ್ರವರ್ತಿಯನ್ನು ಕೊಂದ ನಂತರ, ಅವನ ಹೆಂಡತಿ ಮತ್ತು ಮಗ ಅವನ ದೇಹವನ್ನು ಸ್ನಾನಗೃಹಕ್ಕೆ ಎಳೆದೊಯ್ದು, ದೇಹವನ್ನು ಆರು ತುಂಡುಗಳಾಗಿ ಕತ್ತರಿಸಿದ್ದರು. ನಂತರ, ಅವುಗಳನ್ನು ತಮ್ಮ ನೆರೆಹೊರೆಯಲ್ಲಿ ಮತ್ತು ಸುತ್ತಮುತ್ತ ಎಸೆದಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಯುವಕ ದೇಹದ ತುಂಡುಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ತನ್ನ ಸೈಕನ್ ನಲ್ಲಿ ಕನಿಷ್ಠ ಆರು ಟ್ರಿಪ್ಗಳಲ್ಲಿ ಸಾಗಿಸಿ 500 ಮೀ ದೂರದಲ್ಲಿ ಖಾಸ್ ಮಲ್ಲಿಕ್ ಮತ್ತು ದೇಹಿಮೆದನ್ ಮಲ್ಲಾ ಪ್ರದೇಶಗಳಲ್ಲಿ ಎಸೆದಿದ್ದನು ಎಂದು ಅಧಿಕಾರಿ ಹೇಳಿದ್ದಾರೆ.
ಚಕ್ರವರ್ತಿ ಅವರ ಕಾಲುಗಳನ್ನು ಕಸದ ತೊಟ್ಟಿಯಡಿಯಿಂದ ವಶಪಡಿಸಿಕೊಳ್ಳಲಾಗಿದ್ದು, ತಲೆ ಮತ್ತು ಹೊಟ್ಟೆಯನ್ನು ದೇಹಿಮೇಡನ್ ಮಲ್ಲದಲ್ಲಿನ ಕೊಳದಿಂದ ಹೊರತೆಗೆಯಲಾಗಿದೆ. ಕೈಗಳು ಸೇರಿದಂತೆ ದೇಹದ ಇತರ ಭಾಗಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನವೆಂಬರ್ 15ರ ನಸುಕಿನ ವೇಳೆ ತಂದೆ ನಾಪತ್ತೆಯಾಗಿರುವ ಬಗ್ಗೆ ಆರೋಪಿಗಳು ದೂರು ನೀಡಿದ್ದರು. ಆಗಲೇ ಪೊಲೀಸರಿಗೆ ತಾಯಿ-ಮಗನ ಮೇಲೆ ಅನುಮಾನ ಬಂದ ಹೆಚ್ಚಿನ ತನಿಖೆ ನಡೆಸಿದ ವೇಳೆ ಸತ್ಯಾಂಶ ಹೊರ ಬಂದಿದೆ ಎನ್ನಲಾಗುತ್ತಿದೆ.
ಮೃತ ವ್ಯಕ್ತಿ ನೌಕಾಪಡೆಯಲ್ಲಿ ಸುಮಾರು 12 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು ಎನ್ನಲಾಗುತ್ತಿದೆ.
ಸಚಿವ ಅಶ್ವತ್ಥನಾರಾಯಣ ಚೆಕ್, ಲೆಟರ್ ಹೆಡ್ ಚಿಲುಮೆ ಕಚೇರಿಯಲ್ಲಿ ಸಿಕ್ಕಿದ್ದು ಹೇಗೆ? – ಡಿ.ಕೆ ಶಿವಕುಮಾರ್ ಪ್ರಶ್ನೆ
ಮತಾಂತರಕ್ಕೆ ಕುಮ್ಮಕ್ಕು ನೀಡುವ ಕಾಂಗ್ರೆಸ್ ಗೆ ಮತ ಹಾಕಬೇಡಿ : ಸಿ.ಟಿ ರವಿ ವಾಗ್ಧಾಳಿ