ಜೈಪುರ:ಪಂಜಾಬ್ ವ್ಯಕ್ತಿ ತನ್ನ ಗೆಳತಿಯಂತೆ ನಟಿಸಲು ಮತ್ತು ಅವಳ ಪರವಾಗಿ ಪರೀಕ್ಷೆಯನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ್ದು ಸಿಕ್ಕಿ ಬಿದ್ದಿದ್ದಾನೆ. ಆದರೆ ಪ್ರಯತ್ನವು ವಿಫಲವಾಯಿತು.
ಜನವರಿ 7 ರಂದು ಪಂಜಾಬ್‌ನ ಫರೀದ್‌ಕೋಟ್‌ನಲ್ಲಿ ಈ ಘಟನೆ ನಡೆದಿದ್ದು, ಬಾಬಾ ಫರೀದ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಕೊಟ್ಕಾಪುರದ ಡಿಎವಿ ಪಬ್ಲಿಕ್ ಸ್ಕೂಲ್‌ನಲ್ಲಿ ಬಹುಪಯೋಗಿ ಆರೋಗ್ಯ ಕಾರ್ಯಕರ್ತರ ಪರೀಕ್ಷೆಯನ್ನು ನಡೆಸುತ್ತಿದೆ.
ಅಂಗ್ರೇಜ್ ಸಿಂಗ್ ತನ್ನ ಗೆಳತಿ ಪರಮ್‌ಜಿತ್ ಕೌರ್‌ನ ವೇಷ ಧರಿಸಲು ಮತ್ತು ಅವಳ ಪರವಾಗಿ ಪರೀಕ್ಷೆಯನ್ನು ತೆಗೆದುಕೊಳ್ಳಲು ನಿರ್ಧರಿಸಿದನು. ಅವನು ಕೆಂಪು ಬಳೆಗಳು, ಲಿಪ್ಸ್ಟಿಕ್ ಮತ್ತು ಬಿಂದಿಯನ್ನು ಹಾಕಿಕೊಂಡು ಅಲಂಕರಿಸಿ ಬಂದಿದ್ದನು.
ಆದರೆ, ಅಧಿಕಾರಿಗಳು ತಕ್ಷಣ ಕೃತ್ಯವನ್ನು ಹಿಡಿದಿದ್ದು, ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.
ತನ್ನ ಗೆಳತಿಯಂತೆಯೇ ನಟಿಸಲು ಆಕೆಯ ಆಧಾರ್ ಕಾರ್ಡ್ ನಂತೆ ತನ್ನ ಫೋಟೋ ಹಾಕಿ ಮಾಡಿಸಿದ್ದಾನೆ. ಬಯೋಮೆಟ್ರಿಕ್ ಸಾಧನದಲ್ಲಿನ ನಿಜವಾದ ಅಭ್ಯರ್ಥಿಯ ಫಿಂಗರ್‌ಪ್ರಿಂಟ್‌ಗಳಿಗೆ ಅವನ ಫಿಂಗರ್‌ಪ್ರಿಂಟ್‌ಗಳು ಹೊಂದಿಕೆಯಾಗದಿದ್ದಾಗ ಅವನ ಕೃತ್ಯ ಬಯಲಾಯಿತು.
ಅಂಗ್ರೇಜ್ ವಿರುದ್ಧ ಕಾನೂನು ಕ್ರಮವನ್ನು ಪ್ರಾರಂಭಿಸಲಾಗಿದೆ, ಪರಮ್‌ಜಿತ್ ಅವರ ಅರ್ಜಿಯನ್ನು ಆಡಳಿತವು ತಿರಸ್ಕರಿಸಿದೆ.
“ನಾವು ಬಾಬಾ ಫರೀದ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ದೂರನ್ನು ಸ್ವೀಕರಿಸಿದ್ದೇವೆ ಮತ್ತು ನಾವು ಪ್ರಸ್ತುತ ಈ ವಿಷಯವನ್ನು ತನಿಖೆ ಮಾಡುತ್ತಿದ್ದೇವೆ. ನಮ್ಮ ವಿಚಾರಣೆಯನ್ನು ಪೂರ್ಣಗೊಳಿಸಿದ ನಂತರ ನಾವು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವುದು ಗಂಭೀರ ವಿಷಯವಾಗಿದೆ.