ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತಂತ ಪತಿಯೊಬ್ಬ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿ, ಕೆರೆಗೆ ಶವ ಎಸೆದು ಪೊಲೀಸರ ಮುಂದೆ ಬಂದು ಶರಣಾಗಿರುವಂತ ಘಟನೆ ನಡೆದಿದೆ.
ವಿಜಯಪುರ ಮೂಲದ ನಿಜಾಮುದ್ದೀನ್ ಎಂಬಾತನೇ ತನ್ನ ಪತ್ನಿ ರಾಬಿನಾ (32) ಅನೈತಿಕ ಸಂಬಂಧಕ್ಕೆ ಬೇಸತ್ತು ಕತ್ತು ಹಿಸುಕಿ ಕೊಲೆಗೈದು, ಪೊಲೀಸರಿಗೆ ಶರಣಾದಂತ ಆರೋಪಿಯಾಗಿದ್ದಾರೆ.
ವಿಜಯಪುರ ಮೂಲದ ನಿಜಾಮುದ್ದೀನ್ ಹಾಗೂ ರಾಬಿನಾ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ವಾಸವಿದ್ದರು. ರಾಬಿನಾ ಮತ್ತೊಬ್ಬನೊಂದಿಂಗ ಅನೈತಿಕ ಸಂಬಂಧ ಹೊಂದಿದ್ದರಂತೆ. ಎಷ್ಟೇ ಹೇಳಿದರೂ ಬಿಡದಿದ್ದಕ್ಕೆ ಸಿಟ್ಟುಗೊಂಡ ನಿಜಾಮುದ್ದೀನ್ ಕತ್ತು ಹಿಸುಕಿ ಕೊಲೆ ಮಾಡಿ, ಶವವನ್ನು ಕೆರೆಗೆ ಎಸೆದಿದ್ದನು.
ಆ ಬಳಿಕ ಹೊಸಕೋಟೆ ಪೊಲೀಸ್ ಠಾಣೆಗೆ ತೆರಳಿ ಕೊಲೆಯ ಮಾಹಿತಿ ನೀಡಿ, ಶರಣಾಗಿದ್ದಾನೆ. ರಾಬಿನಾ ಅವರ ಶವವನ್ನು ಕೆರೆಯಿಂದ ಮೇಲೆತ್ತಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಐತಿಹಾಸಿಕ ಕೊಟ್ಟೂರು ಗುರುಬಸವೇಶ್ವರ ತೇರು ಏಳೆಯುವ ವೇಳೆ ಅವಘಡ: ಕೂದಲೆಳೆ ಅಂತರದಲ್ಲಿ ಭಕ್ತರು ಪಾರು