ಮಧ್ಯಪ್ರದೇಶ: ಪತ್ನಿಯೊಬ್ಬಳು ತನ್ನ ತಾಯಿ ಮನೆಗೆ ಹೋಗಿ ಅಲ್ಲೇ ಜಾಂಡಾ ಊರಿದ್ದು, ವಾಪಸ್ ಪತಿಯ ಮನೆಗೆ ಇಂದಿರುಗಿಲ್ಲ. ಪತ್ನಿ ಕೂಡ ಅಲ್ಲಿಂದ ಗಂಡನ ಮನೆಗೆ ಬರಲು ನಿರಾಕರಿಸಿದ್ದಾಳೆ. ಇದರಿಂದ ನೊಂದ ಪತಿರಾಯ ಮೊಬೈಲ್ ಟವರ್ ಏರಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಡೆದಿದ್ದು, ಇದರ ವಿಡಿಯೋ ಕೂಡ ವೈರಲ್ ಆಗ್ತಿದೆ.
ಏನಿದು ಘಟನೆ?
ವ್ಯಕ್ತಿಯ ಪತ್ನಿ ತನ್ನ ತಾಯಿ ಮನೆಗೆಂದು ಹೋದವಳು ವಾಪಸ್ ಹಿಂತಿರುಗುತ್ತಿಲ್ಲ ಮತ್ತು ಮಕ್ಕಳೊಂದಿಗೆ ಮಾತನಾಡಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾನೆ. ಇದರಿಂದ ಬೇಸತ್ತು ಕುಡಿದ ಮತ್ತಿನಲ್ಲಿ ಮೊಬೈಲ್ ಟವರ್ ಏರಿದ್ದಾನೆ. ಅಷ್ಟೇ ಅಲ್ಲದೇ, ಇದಕ್ಕೂ ಮೊದಲು ಪೊಲೀಸ್ ಠಾಣೆಯ ಮುಂದೆ ತನ್ನ ಕೈಯನ್ನು ಹರಿತವಾದ ಆಯುಧದಿಂದ ಕೊಯ್ದುಕೊಂಡಿದ್ದಾನೆ.
ವೈರಲ್ ಆಗಿರುವ ವಿಡಿಯೋದಲ್ಲಿ, ವ್ಯಕ್ತಿ ಮೊಬೈಲ್ ಟವರ್ನ ಮಧ್ಯದಲ್ಲಿ ಕುಳಿತಿರುವುದನ್ನು ಕಾಣಬಹುದು. ಈ ವೇಳೆ ಪೊಲೀಸ್ ಅಧಿಕಾರಿಗಳು ಕೆಳಗೆ ಬರುವಂತೆ ಮನವಿ ಮಾಡುತ್ತಿದ್ದಾರೆ. ವ್ಯಕ್ತಿ ಜೋರಾಗಿ ಕೂಗಿ ಹೇಳುತ್ತಾ, ತನ್ನ ಹೆಂಡತಿಯನ್ನು ಮರಳಿ ಕರೆಸುವಂತೆ ಪೊಲೀಸರನ್ನು ಕೇಳುತ್ತಿರುವುದು ಕೇಳಿಬರುತ್ತದೆ.
#Khandwa पत्नी मायके से नही आई तो युवक ने पहले थाने में काटी नस फिर चढ़ा टॉवर पर एक घंटे चला हाई वोल्टेज ड्रामा कोतवाली पुलिस ने बड़ी मसक्कत कर समझाईस दे उसे टॉवर से नीचे उतारा #viralvideo #viral @ABPNews @abplive @iampulkitmittal #MadhyaPradesh pic.twitter.com/D0vLKzFWnO
— Shaikh Shakeel (@ShakeelABP) August 23, 2022
ಕೊನೆಗೂ ಪೊಲೀಸರು ವ್ಯಕ್ತಿಯನ್ನು ಮೊಬೈಲ್ ಟವರ್ನಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾದರು. ವ್ಯಕ್ತಿಯನ್ನು ಖಾಂಡ್ವಾದ ಕೊಡಿಯಾ ಹನುಮಾನ್ ದೇವಸ್ಥಾನದ ನಿವಾಸಿ ದಿನೇಶ್ ರಾಮಧನ್ ಕೈತ್ವಾಸ್ ಎಂದು ಗುರುತಿಸಲಾಗಿದೆ. ಈತ ನೀಡಿದ ದೂರನ್ನು ಪೊಲೀಸರು ದಾಖಲಿಸಿಕೊಂಡಿಲ್ಲ. ಈ ಕಾರಣಕ್ಕಾಗಿ ಕೈ ಕೊಯ್ದುಕೊಂಡಿದ್ದಲ್ಲದೇ, ಮೊಬೈಲ್ ಟವರ್ ಏರಿ ಕುಳಿತ್ತಿದ್ದ ಎನ್ನಲಾಗಿದೆ.
ದಿನೇಶ್ ಕೆಳಗಿಳಿದ ನಂತರ, ಆತನನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕೊತ್ವಾಲಿ ಪೊಲೀಸ್ ಠಾಣೆಯ ಪ್ರಭಾರಿ ಪೊಲೀಸ್ ಇನ್ಸ್ಪೆಕ್ಟರ್ ಟಿಐ ಭುವನ್ ವಾಸ್ಕಲೆ ಮಾತನಾಡಿ, ದಿನೇಶ್ ಅವರು ಮೊದಲು ಕೈಯನ್ನು ಕೊಯ್ದುಕೊಂಡಿದ್ದರು. ಹೀಗಾಗಿ, ಚಿಕಿತ್ಸೆಯ ನಂತ್ರ ಅವರ ವರದಿಯನ್ನು ಬರೆಯಲು ಪೊಲೀಸ್ ಸಿಬ್ಬಂದಿ ನಿರ್ಧರಿಸಿದ್ದರು. ಆದ್ರೆ, ಅಷ್ಟರಲ್ಲಾಗಲೇ ದಿನೇಶ್ ಮೊಬೈಲ್ ಟವರ್ ಏರಿ ಕುಳಿತಿದ್ದ ಎಂದಿದ್ದಾರೆ.
Shocking: ಶಾಲೆಯಲ್ಲಿ ಕೊಡ್ತಿದ್ದ ಹೋಮ್ವರ್ಕ್ಗೆ ಬೇಸತ್ತ ವಿದ್ಯಾರ್ಥಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ…