ಬೆಂಗಳೂರು : ಸಾಮಾನ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವವರು ನದಿಗೋ ಅಥವಾ ಬೆಟ್ಟದಿಂದ ಜಿಗಿದು, ಇಲ್ಲವೇ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಇತ್ತೀಚಿಗೆ ಬೆಂಗಳೂರಿನಲ್ಲಿ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿ ಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇಂದು ಕೂಡ ಅಂಥದ್ದೇ ಘಟನೆ ನಡೆದಿದ್ದು, ಬೆಂಗಳೂರಿನ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿ ಒಬ್ಬ ಮೆಟ್ರೋ ಟ್ರ್ಯಾಕ್ ಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಅಲ್ಲಿಯೇ ಇದ್ದಂತಹ ಮಹಿಳಾ ಸೆಕ್ಯೂರಿಟಿ ಗಾರ್ಡ್ ನ ಸಮಯಪ್ರಜ್ಞೆಯಿಂದ ಆತನ ಜೀವ ಉಳಿದಿದೆ.
ಬಿಹಾರ್ ಮೂಲದ ಸಿದ್ದಾರ್ಥ್ (35) ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಮೆಟ್ರೋ ಹಳಿಗೆ ಜಿಗಿದಿದ್ದಾನೆ. ಕೂಡಲೇ ಎಚ್ಚೆತ್ತ ಸೆಕ್ಯೂರಿಟಿ ಗಾರ್ಡ್ ರಶ್ಮಿ ಮೆಟ್ರೋ ಸ್ಟೇಷನ್ ನಲ್ಲಿದ್ದ ಎಮರ್ಜೆನ್ಸಿ ಟ್ರಿಪ್ ಸಿಸ್ಟಮ್ (ETS) ಆಫ್ ಮಾಡಿದ್ದಾರೆ. ಪ್ಲಾಟ್ ಫಾರ್ಮನಲ್ಲಿ ಕೆಂಪು ಬಣ್ಣದ ಬಾಕ್ಸ್ ನಲ್ಲಿ ಇರುವ ಇ ಟಿ ಎಸ್ ಬಾಕ್ಸ್ ಬಟನ್ ಆಫ್ ಮಾಡಿದ್ದಾರೆ.
ಇದನ್ನು ಆಫ್ ಮಾಡಿದರೆ ಮೆಟ್ರೋ ರೈಲಿನ ಪವರ್ ಸಂಪೂರ್ಣ ಆಫ್ ಆಗುತ್ತದೆ. ಬಾಕ್ಸ್ ನಲ್ಲಿನ ETS ಬಟನ್ಗೆ ಗ್ಲಾಸ್ ಅಳವಡಿಸಲಾಗಿರುತ್ತದೆ. ಜೀವ ಉಳಿಸಲು ಹ್ಯಾಮರ್ ಮರೆತು ಕೈಯಲ್ಲಿ ಗುದ್ದಿ ಬಟನ್ ಆಫ್ ಮಾಡಿದ್ದಾರೆ. ಹ್ಯಾಮರ್ ಇದ್ದರು ರಶ್ಮಿ ಕೈಯಲ್ಲಿ ಗುದ್ದಿದರಿಂದ ರಶ್ಮಿ ಕೈಗೆ ಇದೀಗ ಗಾಯವಾಗಿದೆ. ಸೆಕ್ಯೂರಿಟಿ ಗಾರ್ಡ್ ರಶ್ಮಿ ಕಾರ್ಯಕ್ಕೆ ಸಾರ್ವಜನಿಕರಿಂದ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೌದು ಬೆಂಗಳೂರಿನ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ, ಚಲ್ಲಘಟ್ಟಪುರದಿಂದ ಕೆಂಗೇರಿ ಕಡೆಗೆ ತೆರಳುತ್ತಿದ್ದ ನೇರಳೆ ಮಾರ್ಗದ ಮೆಟ್ರೋ ಟ್ರೈನು ಬರುತ್ತಿತ್ತು. ಈ ವೇಳೆ ಬಿಹಾರ್ ಮೂಲದ ಸಿದ್ದಾರ್ಥ್ ಹಳಿಯ ಮೇಲೆ ಜಿಗಿದಿದ್ದಾನೆ. 10 ಮೀಟರ್ ಟ್ರೈನ್ ಕ್ರಮಿಸಿದರು ಕೂಡ ಆತ ಬದುಕುಳಿದಿದ್ದೆ ಪವಾಡ ಸದೃಶ ಎಂಬಂತ್ತಾಗಿದೆ. ಆದರೆ ಆತ ಬದುಕು ಉಳಿದಿದ್ದು ಸೆಕ್ಯೂರಿಟಿ ಗಾರ್ಡ್ ರಶ್ಮಿ ಎಂಬ ಮಹಿಳೆಯ ಸಮಯಪ್ರಜ್ಞೆಯಿಂದ ಎಂದು ತಿಳಿದು ಬಂದಿದೆ.
ಮಾಡಿರುವ ಸಾಲವನ್ನು ತೀರಿಸಲಕ್ಕೆ ಆಗದೆ ಬಿಹಾರ್ ಮೂಲದ ಸಿದ್ಧಾರ್ಥ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಅಲ್ಲಿಯೆ ಕರ್ತವ್ಯ ನಿರತದಲ್ಲಿದ್ದ ಮೆಟ್ರೋ ಸಿಬ್ಬಂದಿ ರಶ್ಮಿ ಎನ್ನುವವರು ಕೂಡಲೇ ETS ಬಟನ್ ಮಾಡಿದ್ದು ಆಕೆಯ ಸಮಯ ಪ್ರಜ್ಞೆಯಿಂದ ವ್ಯಕ್ತಿಯ ಜೀವ ಉಳಿದಿದೆ. ಇದೀಗ ಎಲ್ಲೆಡೆ ರಶ್ಮಿಯವರ ಈ ಒಂದು ಸಮಯಪ್ರಜ್ಞೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.