ಹುಬ್ಬಳ್ಳಿ: ರಾಜ್ಯದಲ್ಲಿ ಬಡ್ಡಿ ದಂಧೆಕೋರರ ಕಿರುಕುಳ ಹೆಚ್ಚಾಗಿದೆ. ಅಸಲು ಕಟ್ಟಿದ್ದರೂ ಬಡ್ಡಿ ಮೇಲೆ ಚಕ್ರಬಡ್ಡಿ ಹಾಕಿ ಹಣ ಕಟ್ಟುವಂತೆ ಕಿರುಕುಳ ನೀಡಿದ್ದಕ್ಕೆ ವ್ಯಕ್ತಿಯೊಬ್ಬ ಲಾರಿ ಚಕ್ರಕ್ಕೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಣಕಲ್ ನಲ್ಲಿ ನಡೆದಿದೆ.
ಹುಬ್ಬಳ್ಳಿಯ ಉಣಕಲ್ ನಲ್ಲಿ ಬಡ್ಡಿ ದಂಧೆಕೋರರ ಹಾವಳಿ ಹೆಚ್ಚಾಗಿದೆ. ಉಣಕಲ್ ನ ಸಿದ್ದು ಕೆಂಚಣ್ಣನವರ(40) ಎಂಬುವರು ಮಹೇಶ ಚಿಕ್ಕವೀರಮಠ ಎಂಬುವರ ಬಳಿಯಲ್ಲಿ 10 ಲಕ್ಷ ರೂ ಸಾಲ ಪಡೆದಿದ್ದರು. ಅಸಲು ಸಹಿತ ಬಡ್ಡಿಯನ್ನು ಕಟ್ಟಿದ್ದರೂ ಮತ್ತೆ ಮತ್ತೆ ಹಣ ನೀಡುವಂತೆ ಮಹೇಶ ಚಿಕ್ಕವೀರಮಠ ಪೀಡಿಸುತ್ತಿದ್ದರಂತೆ.
ಇದೇ ಕಾರಣಕ್ಕೆ ಹುಬ್ಬಳ್ಳಿಯ ಉಣಕಲ್ ನಿವಾಸಿ ಚಿಕ್ಕ ಕೆಂಚಣ್ಣನವರ ಎಂಬುವರು ಲಾರಿ ಚಕ್ರಕ್ಕೆ ತಲೆಕೊಟ್ಟು ಆತ್ಹಮತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯ ಗೋಕುಲ ರೋಡ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
BREAKING NEWS: ನಟ ಸೈಫ್ ಅಲಿ ಖಾನ್ ಚೂರಿ ಇರಿತ ಪ್ರಕರಣ: ಆರೋಪಿ ಶೆಹಜಾದ್ ಗೆ 5 ದಿನ ಪೊಲೀಸ್ ಕಸ್ಟಡಿಗೆ