ಬೆಳಗಾವಿ: ಜಿಲ್ಲೆಯ ಚಿಕ್ಕೊಡಿ ಝಂಜರವಾಡ ಗ್ರಾಮದಲ್ಲಿ ಅನಾರೋಗ್ಯದಿಂದಾಗಿ ಪತ್ನಿ ಸಾವನ್ನಪ್ಪಿದ ಹಿನ್ನೆಲೆ ಮನನೊಂದು ಪತಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
BIGG BREAKING NEWS: ರಾಜ್ಯದಲ್ಲಿ ಹೆಚ್ಚಿದ ಚಿರತೆ ಹಾವಳಿ: ಉಡುಪಿಯಲ್ಲೂ ಚಿರತೆ ಪ್ರತ್ಯಕ್ಷ; ಸ್ಥಳೀಯರಿಗೆ ಆತಂಕ
26 ವರ್ಷದ ಸದಾಶಿವ ರಾಮಪ್ಪ ಕಾಂಬಳೆ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಎರಡು ವರ್ಷದ ಹಿಂದೆಯಷ್ಟೇ ಸದಾಶಿವ ರಾಮಪ್ಪ ಕಾಂಬಳೆ, ರೂಪಾ ಅವರನ್ನು ವಿವಾಹವಾಗಿದ್ದರು. ಆದರೆ ಅನಾರೋಗ್ಯ ಕಾರಣ ರೂಪ ಅವರು ಕಳೆದ ಎರಡು ದಿನದ ಹಿಂದೆಯಷ್ಟೇ ನಿಧನರಾಗಿದ್ದರು.
ಇದರಿಂದ ಮನನೊಂದು ಸದಾಶಿವ ರಾಮಪ್ಪ ಕಾಂಬಳೆ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಕೂಡಲೇ ಅವರನ್ನು ವಿಜಯಪುರ ಜಿಲ್ಲೆ ಖಾಸಗಿ ಆಸ್ಪತ್ರೆಗೆ ಸದಾಶಿವ ದಾಖಲು ಮಾಡಲಾಗಿತ್ತು.
BIGG BREAKING NEWS: ರಾಜ್ಯದಲ್ಲಿ ಹೆಚ್ಚಿದ ಚಿರತೆ ಹಾವಳಿ: ಉಡುಪಿಯಲ್ಲೂ ಚಿರತೆ ಪ್ರತ್ಯಕ್ಷ; ಸ್ಥಳೀಯರಿಗೆ ಆತಂಕ
ಆದರೆ ಅವರ ದೇಹ 80 ರಷ್ಟು ಪ್ರತಿಶತದಷ್ಟು ಬೆಂಕಿಯಿಂದ ಸುಟ್ಟುಹೋಗಿ ಗಂಭೀರವಾಗಿ ಗಾಯಗೊಂಡಿದ್ದರು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ಆಸ್ಪತ್ರೆಯಲ್ಲಿಯೇ ಸದಾಶಿವ ರಾಮಪ್ಪ ಕಾಂಬಳೆ ಅವರು ಕೊನೆಯುಸಿರೆಳೆದಿದ್ದಾರೆ.