ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ತನ್ನ ಪತ್ನಿ ತವರಿನಿಂದ ಬರಲಿಲ್ಲವೆಂದು ಮುನಿಸಿಕೊಂಡ ಪತಿರಾಯ 75 ಅಡಿಯ ಹೈ ಟೆನ್ಶನ್ ಟವರ್ ಏರಿ ಕೆಲ ಆತಂಕ ಮೂಡಿಸಿದ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಹೌದು, ಇಂತಹದ್ದೊಂದು ಘಟನೆ ಛತ್ತೀಸಗಡ್ ಭಿಲಾಯಿಯ ಗನಿಯಾರಿ ಗ್ರಾಮದಲ್ಲಿ ನಡೆದಿದೆ ಎಂದು ಹೇಳಲಾಗಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ,
ವ್ಯಕ್ತಿಯೊಬ್ಬ ತವರು ಮನೆಗೆ ಹೋದ ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗಲು ಬರುತ್ತಾನೆ. ಆದರೆ ಆತನ ಮಾವ ಮಗಳನ್ನು ವಾಪಸ್ ಗಂಡನ ಮನೆಗೆ ಕಳುಹಿಸಲು ನಿರಾಕರಿಸುತ್ತಾನೆ. ಇದರಿಂದ ಕೋಪಗೊಂಡ ವ್ಯಕ್ತಿ ತನ್ನ ಮಾವ ಹಾಗೂ ಹೆಂಡತಿ ಮೇಲೆ ಒತ್ತಡ ಹೇರಲೆಂದು , ಅವರನ್ನು ಹೆದರಿಸಲೆಂದು 75 ಅಡಿಯ ಹೈ ಟೆನ್ಶನ್ ಟವರ್ ಏರಿ ಕೂರುತ್ತಾನೆ. ಯಾರು ಏನೇ ಮಾಡಿ ಮನವೊಲಿಸಿದರೂ ಆತ ಮಾತ್ರ ಕೆಳಗಿಳಿಯಲಿಲ್ಲ, ಕೊನೆಗೆ ಸ್ಥಳಕ್ಕೆ ಬಂದ ಪೊಲೀಸರು ಪತ್ನಿಯನ್ನು ವಾಪಸ್ ಕಳುಹಿಸುವುದಾಗಿ ಭರವಸೆ ನೀಡುತ್ತಾರೆ. ಬಳಿಕ ಆತ ಟವರ್ ನಿಂದ ಕೆಳಗಿಳಿಯುತ್ತಾನೆ. ಮಗಳನ್ನು ಗಂಡನ ಮನೆಗೆ ಮಾವ ಯಾಕೆ ಕಳುಹಿಸುತ್ತಿಲ್ಲ ಎಂಬುದು ಮಾತ್ರ ಸ್ಪಷ್ಟವಾಗಿ ಗೊತ್ತಿಲ್ಲ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
पत्नी को लेने ससुराल पहुंचा था युवक ससुराल वालों ने नहीं भेजा तो पति बन गया शोले फिल्म का धर्मेंद्र और चढ़ गया हाईटेंशन टावर पर.. pic.twitter.com/jXyPJx1pua
— alkesh kushwaha (@alkesh_kushwaha) September 21, 2022
‘ವಿಶ್ವವಿಖ್ಯಾತ ಮೈಸೂರು ದಸರಾ’ಗೆ ತೆರಳುವ ‘ವಾಹನ ಸವಾರ’ರಿಗೆ ಗುಡ್ ನ್ಯೂಸ್: ‘ತೆರಿಗೆ ವಿನಾಯ್ತಿ’ ನೀಡಿ ಸರ್ಕಾರ ಆದೇಶ
ಶಿವಮೊಗ್ಗ: ನಾಳೆ ಮತ್ತು ನಾಡಿದ್ದು, ನಗರದ ವಿವಿಧೆಡೆ ‘ವಿದ್ಯುತ್ ವ್ಯತ್ಯಯ’ | Power Cut