ಬೆಂಗಳೂರು: ಪ್ರೇಮ ನಿವೇದನೆಯ ಹೆಸರಿನಲ್ಲಿ ನಂಬಿಸಿ ಪ್ರಿಯಕರನಿಗೆ ಬೆಂಕಿ ಹಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಿಯಕರ ಕಿರಣ್ ಎಂಬುವವರನ್ನು ಸಜೀವ ದಹನ ಮಾಡಿದ ಆರೋಪದ ಮೇಲೆ ಪ್ರೇಯಸಿ ಪ್ರೇಮಾಳನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ:
ಬೆಂಗಳೂರಿನ ಅಂಜನಾನಗರದಲ್ಲಿರುವ ತನ್ನ ಮನೆಗೆ ನಿನ್ನೆ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಪ್ರೇಮಾ ಪ್ರಿಯಕರ ಕಿರಣ್‌ನನ್ನು ಕರೆಸಿಕೊಂಡಿದ್ದಳು. “ನಿನಗೆ ವೆಸ್ಟರ್ನ್ ಸ್ಟೈಲ್‌ನಲ್ಲಿ (ವಿದೇಶಿ ಶೈಲಿ) ಪ್ರೇಮ ನಿವೇದನೆ ಮಾಡುತ್ತೇನೆ” ಎಂದು ನಂಬಿಸಿ ಆತನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು ಎನ್ನಲಾಗಿದೆ.
ನಂಬಿಸಿ ನಡೆಸಿದ ಕ್ರೌರ್ಯ:
ವೆಸ್ಟರ್ನ್ ಸ್ಟೈಲ್ ಪ್ರಪೋಸಲ್ ಎಂದು ನಂಬಿಸಿದ ಪ್ರೇಮಾ, ಕಿರಣ್‌ನ ಕಣ್ಣಿಗೆ ಬಟ್ಟೆ ಕಟ್ಟಿ, ಕೈಕಾಲುಗಳನ್ನು ಹಗ್ಗದಿಂದ ಬಿಗಿದಿದ್ದಾಳೆ. ಈ ವೇಳೆ ಕಿರಣ್ “ಯಾಕೆ ಇಷ್ಟು ಗಟ್ಟಿಯಾಗಿ ಹಗ್ಗ ಕಟ್ಟುತ್ತಿದ್ದೀಯ?” ಎಂದು ಕೇಳಿದಾಗ, “ಇದೆಲ್ಲಾ ವಿದೇಶಿ ಶೈಲಿ, ನಿನಗೆ ಗೊತ್ತಾಗಲ್ಲ ಸುಮ್ಮನಿರು” ಎಂದು ನಂಬಿಸಿ ಆತನನ್ನು ಅಸಹಾಯಕ ಸ್ಥಿತಿಗೆ ತಂದಿದ್ದಾಳೆ.
ಬೆಂಕಿ ಹಚ್ಚಿ ವಿಡಿಯೋ ಚಿತ್ರೀಕರಣ!
ಕಿರಣ್ ಸಂಪೂರ್ಣವಾಗಿ ಹಗ್ಗದಿಂದ ಬಂಧಿಯಾದ ಮೇಲೆ, ಆತನ ಮೇಲೆ ಸೀಮೆಎಣ್ಣೆ ಮತ್ತು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಕಿರಣ್ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನರಳಾಡುತ್ತಿದ್ದರೂ ಕರುಣೆ ತೋರದ ಪ್ರೇಮಾ, ಆ ಭೀಕರ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾಳೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಬೆಂಕಿಯ ಜ್ವಾಲೆಗೆ ಸಿಲುಕಿದ ಕಿರಣ್ ಪ್ರೇಮಾಳ ಮನೆಯಲ್ಲಿಯೇ ಸಜೀವ ದಹನವಾಗಿದ್ದಾರೆ.
ಪೊಲೀಸರ ಕಾರ್ಯಾಚರಣೆ:
ಘಟನೆ ನಡೆದ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಬ್ಯಾಡರಹಳ್ಳಿ ಪೊಲೀಸರು ಪ್ರೇಮಾಳನ್ನು ವಶಕ್ಕೆ ಪಡೆದಿದ್ದರು. ಪ್ರಾಥಮಿಕ ವಿಚಾರಣೆಯ ನಂತರ ಆಕೆಯನ್ನು ಅಧಿಕೃತವಾಗಿ ಬಂಧಿಸಲಾಗಿದೆ. ಕೊಲೆಗೆ ನಿಖರವಾದ ಕಾರಣವೇನು? ಈ ಕೃತ್ಯದಲ್ಲಿ ಬೇರೆಯವರು ಭಾಗಿಯಾಗಿದ್ದಾರೆಯೇ? ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ನಗರವನ್ನೇ ಬೆಚ್ಚಿಬೀಳಿಸಿದ ಈ ಘಟನೆ ಪ್ರೇಮದ ಹೆಸರಿನಲ್ಲಿ ನಡೆದ ಅತಿದೊಡ್ಡ ವಂಚನೆ ಮತ್ತು ಕ್ರೌರ್ಯಕ್ಕೆ ಸಾಕ್ಷಿಯಾಗಿದೆ.
CUET PG ಫಲಿತಾಂಶ 2026: ಏಪ್ರಿಲ್ 24ಕ್ಕೆ ಅಂಕಪಟ್ಟಿ ಬಿಡುಗಡೆ; ಫಲಿತಾಂಶ ನೋಡುವುದು ಹೇಗೆ? ಇಲ್ಲಿದೆ ಮಾಹಿತಿ
ಕಾಗದದ ಹಣಕ್ಕಿಲ್ಲ ಮೌಲ್ಯ, ‘ಚಿನ್ನ’ವೇ ಸರ್ವಸ್ವ: ಬಾಬಾ ವಂಗಾ ಸ್ಪೋಟಕ ಭವಿಷ್ಯ!








