ಇಂದೋರ್: ಇಂದೋರ್ನ ದೇವಿ ಅಹಲ್ಯಾಬಾಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ “ಬ್ಯಾಗ್ನಲ್ಲಿ ಬಾಂಬ್” ಕುರಿತು ಹಾಸ್ಯ ಚಟಾಕಿ ಹಾರಿಸಿ ವ್ಯಕ್ತಿಯ ಕುಟುಂಬಕ್ಕೆ ಫೈಟ್ ಮಿಸ್ ಆಗಿದ್ದು, ವಾಪಸ್ ಮನೆ ಕಡೆ ಹೋಗಿರುವ ಘಟನೆ ನಡೆದಿದೆ.
ಸೋಮವಾರ ರಾತ್ರಿ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ವ್ಯಕ್ತಿಯೊಬ್ಬ ʻನನ್ನ ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ಜೋಕ್ʼ ಮಾಡಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೆಲ ಕಾಲ ಅವರನ್ನು ತೀವ್ರ ವಿಚಾರಣೆ ಮತ್ತು ಅವರ ಬ್ಯಾಗ್ ಪರಿಶೀಲನೆಗೆ ಮುಂದಾಗಬೇಕಿತ್ತು. ಈ ವೇಳೆ ಬ್ಯಾಗ್ನಲ್ಲಿ ಆಕ್ಷೇಪಾರ್ಹವಾದ ಏನೂ ಕಂಡುಬಂದಿಲ್ಲ. ಆಗ ವ್ಯಕ್ತಿ ನಾನು ತಮಾಷೆ ಮಾಡಿದೆ ಎಂದಿದ್ದಾನೆ. ಆದ್ರೆ, ಅವರು ತಮಾಷೆ ಮಾಡಲು ಹೋಗಿ ಫ್ಲೈಟ್ ಮಿಸ್ ಮಾಡಿಕೊಂಡಿದ್ದಾನೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಸಿವಿ ರವೀಂದ್ರನ್ ಬುಧವಾರ ಹೇಳಿದ್ದಾರೆ.
ಈ ವ್ಯಕ್ತಿ ತನ್ನ ಹೆಂಡತಿ ಮತ್ತು ಮಗಳೊಂದಿಗೆ ಪ್ರಯಾಣಿಸಬೇಕಿತ್ತು. ತೀವ್ರ ವಿಚಾರಣೆ ನಂತ್ರ, ವ್ಯಕ್ತಿ ಲಿಖಿತ ರೂಪದಲ್ಲಿ ಕ್ಷಮೆ ಕೇಳಿದ್ದಾನೆ. ನಂತ್ರ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿ ಕುಟುಂಬವನ್ನು ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿಸಿದರು ಎಂದು ಏರೋಡ್ರೋಮ್ ಪೊಲೀಸ್ ಠಾಣೆಯ ಉಸ್ತುವಾರಿ ಸಂಜಯ್ ಶುಕ್ಲಾ ಹೇಳಿದ್ದಾರೆ.
NEET Result 2022: ನೀಟ್ ಯುಜಿ ಫಲಿತಾಂಶ ಪ್ರಕಟ…. ರಿಸಲ್ಟ್ ಚೆಕ್ ಮಾಡಲು ಹೀಗೆ ಮಾಡಿ!
BIG NEWS: ‘ವಾಣಿ ವಿಲಾಸ ಸಾಗರ ಡ್ಯಾಂ’ ಸುರಕ್ಷಿತ, ವದಂತಿ ನಂಬಬೇಡಿ- ಶಾಸಕ ಪೂರ್ಣಿಮಾ ಶ್ರೀನಿವಾಸ್ ಮನವಿ