ಹುಬ್ಬಳ್ಳಿ : ಕಚ್ಚಿದ ಹಾವನ್ನು ಸಾಯಿಸಿ ಹಾವಿನ ಸಮೇತ ಆಸ್ಪತ್ರೆಗೆ ಯುವಕನೊಬ್ಬ ಚಿಕಿತ್ಸೆಗೆ ಬಂದ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಹುಬ್ಬಳ್ಳಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ತಂದೆ, ಮಗ ಶೇಂಗಾ ಕೀಳುವಾಗ ಮಗ ಫಕ್ಕೀರಪ್ಪ ಅಣ್ಣಿಗೇರಿಗೆ ಹಸಿರು ಹಾವು ಕಚ್ಚಿದೆ. ಕೂಡಲೇ ಕಚ್ಚಿದ ಹಾವಿನ ತಲೆಯನ್ನು ಜಜ್ಜಿ ಅದನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿಕೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಬಂದಿದ್ದಾನೆ.
ಬಳಿಕ ಫಕ್ಕೀರಪ್ಪ ವೈದ್ಯರಿಗೆ ಹಾವನ್ನ ತೋರಿಸಿ, ಇದೆ ಹಾವು ಕಚ್ಚಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಸದ್ಯ ಯುವಕನನ್ನು ವೈದ್ಯರು ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದಾರೆ.