ಬೆಂಗಳೂರು:ಐ.ಎ.ಎಸ್ ಐಪಿಎಸ್ ಗಳ ಹೆಸರೇಳಿ ಕೆ.ಎ.ಎಸ್ ಪಾಸ್ ಮಾಡಿಸ್ತೀನಿ ಎಂದು ವಂಚನೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
BIGG NEWS: ಚಿಕ್ಕಮಗಳೂರಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ; ಮೂಡಿಗೆರೆಯ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ
ಸವಿತಾ ಶಾಂತಪ್ಪ ಎಂಬುವರಿಗೆ ಕೆಎಎಸ್ ಪಾಸ್ ಮಾಡಿಸ್ತಿನಿ ಅಂತ ಹೇಳಿ ಬರೋಬ್ಬರಿ 59 ಲಕ್ಷ ಹಣಪಡೆದಿದ್ದನು.ಸಿದ್ದರಾಜು ಕಟ್ಟಿಮನಿ ಎಂಬಾತನ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸವಿತಾ ಶಾಂತಪ್ಪ ಎಂಬುವವರಿಂದ ಪೊಲೀಸರಿಗೆ ದೂರು ನೀಡಿದ್ದಾರೆ.ಸವಿತಾ ಕಳೆದ ಕೆಲ ವರ್ಷಗಳಿಗೆ ಕೆ.ಎ.ಎಸ್ ಪರೀಕ್ಷೆಗೆ ತಯಾರಿ ನಡೆಸಿದ್ದರು. ಕಲ್ಬುರ್ಗಿಯ ಅಫ್ಜಲ್ಪುರ ಮೂಲದ ಸವಿತಾ ಬೆಂಗಳೂರಲ್ಲಿ ಕೆ.ಎ.ಎಸ್ ಪರೀಕ್ಷೆಗೆ ತಯಾರಿ ನಡೆಸ್ತಿದ್ರು.
ಈ ವೇಳೆ ಸವಿತಾರಿಗೆ ಆರೋಪಿ ಸಿದ್ದರಾಜ್ ಕಟ್ಟಿಮನಿ ಪರಿಚಿತನಾಗಿದ್ದನು. ಐ.ಎ.ಎಸ್ ಆಫೀಸರ್ಸ್ ಗೊತ್ತು ಐಪಿಎಸ್ ಆಫೀಸರ್ಸ್ ಗೊತ್ತು ಎಂದು ನಂಬಿಸಿದ್ದ ಎಂದು ತಿಳಿದುಬಂದಿದೆ. ಅಲ್ಲದೇ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್, ಹಾಗೂ ಡಿಜಿಐಜಿಪಿ ಪ್ರವೀಣ್ ಸೂದ್ ತೀರ ಪರಿಚಿತರು ಎಂದಿದ್ದ.ಆಕೆ ಆರೋಪಿ ಮಾತನ್ನ ನಂಬಿ ಹಣ ಕೊಡಲಿಕ್ಕೆ ಮುಂದಾಗಿದ್ದಳು. ಮೊದಲ ಹಂತದಲ್ಲಿ 15 ಲಕ್ಷ ನಂತರ 24 ಲಕ್ಷ ಹೀಗೆ ಹಂತ ಹಂತವಾಗಿ 59 ಲಕ್ಷ ಹಣ ಪೀಕಿರೋ ಆರೋಪಿ.
ಮಗಳು ಕೆ.ಎ.ಎಸ್ ಆಫಿಸರ್ ಆಗ್ತಾಳೆಂದು 3.5 ಎಕರೆ ಜಮೀನು ಅಡಮಾನವಿಟ್ಟು ಸವಿತಾ ತಂದೆ ಶಾಂತಪ್ಪ ಹಣ ನೀಡಿದ್ದನು.ಕಡೆಗೆ ಈತ ಪದೇ ಪದೇ ಹಣ ಕೇಳೋದನ್ನ ಕಂಡು ಹಣವಾಪಸ್ ನೀಡುವಂತೆ ಕೇಳಿದ್ದಳು ಸವಿತಾ.
ಏನ್ ಮಾಡ್ತಿಯೋ ಮಾಡ್ಕೊ, ಕೊಟ್ಟಿರುವ ಹಣ ವಾಪಸ್ ಕೊಡಲ್ಲ. ಸುಮ್ನೆ ಮತ್ತೆ ಮತ್ತೆ ಹಣ ಕೇಳಿದ್ರೆ ನಿಮ್ ಮನೇಲ್ ಯಾರನ್ನೂ ಉಳ್ಸಲ್ಲ ಎಂದು ಬೆದರಿಕೆ ಹಾಕಿದ್ದ ಆರೋಪಿ ಕಟ್ಟಿಮನಿ.
BIGG NEWS: ಚಿಕ್ಕಮಗಳೂರಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ; ಮೂಡಿಗೆರೆಯ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ
ಕೆಲಸವೂ ಸಿಗದೇ ಹಣವನ್ನು ಕಳೆದುಕೊಂಡು, ಜಮೀನನ್ನ ಅಡಮಾನವಿಟ್ಟು ಕಣ್ಣಿರಿಡ್ತಿರೋ ಯುವತಿ ಸವಿತಾ ಮತ್ತು ಕುಟುಂಬಸ್ಥರು.ಸದ್ಯ ತನಗಾದ ಅನ್ಯಾಯದ ಬಗ್ಗೆ ವಿಜಯನಗರ ಠಾಣೆಯಲ್ಲಿ ದೂರು ನೀಡಿದ್ದಾಳೆ. ಯುವತಿ ನೀಡಿರೋ ದೂರಿನನ್ವಯ ಐಪಿಸಿ 420 ಅಡಿ ಪ್ರಕರಣ ದಾಖಲಿಸಿ ಆರೋಪಿಯ ಬಂಧಿಸಿದ್ದಾರೆ.