ಶಿವಮೊಗ್ಗ: ಸಾಗರದಲ್ಲಿ ವಕೀಲರೊಬ್ಬರಿಗೆ ನೋಟಿಸ್ ನೀಡಿದ್ದಕ್ಕೆ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿದ್ದನು. ಇಂತಹ ಆರೋಪಿಯನ್ನು ಬಂಧಿಸುವಂತೆ ಡಿವೈಎಸ್ಪಿಗೆ ಸಾಗರ ತಾಲ್ಲೂಕು ವಕೀಲರ ಸಂಘವು ದೂರು ನೀಡಿತ್ತು. ಈ ದೂರಿನ ಬೆನ್ನಲ್ಲೇ ವಕೀಲ ಪ್ರವೀಣ್ ಗೆ ಜೀವ ಬೆದರಿಕೆ ಹಾಕಿದಂತ ಆರೋಪಿ ಗಣೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೈ ಜೈಲಿಗಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸಿವಿಲ್ ನ್ಯಾಯಾಲಯ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ವಕೀಲ ಕೆ.ವಿ ಪ್ರವೀಣ್ ಅವರು ಅರ್ಜಿ ಸಲ್ಲಿಸಿ ಮಧ್ಯಂತರ ಇಂಜೆಕ್ಷನ್ ಆದೇಶ ಪಡೆದಿದ್ದರು. ಈ ಮಾಹಿತಿಯನ್ನು ಪ್ರತಿವಾದಿ ಗಣೇಶ್ ಎಂಬುವರಿಗೆ ರಿಜಿಸ್ಟರ್ ಪೋಸ್ಟ್ ಮೂಲಕ ನೋಟಿಸ್ ನಲ್ಲಿ ತಿಳುಹಿಸಲು ಕಳುಹಿಸಿದ್ದರು.
ಸಾಗರ ನ್ಯಾಯಾಲಯ ಮಧ್ಯಂತರ ಇಂಜೆಕ್ಷನ್ ಆದೇಶದ ನೋಟಿಸ್ ನೋಡಿದಂತ ಗಣೇಶ್ ಎಂಬಾತ, ವಕೀಲ ಕೆ.ವಿ ಪ್ರವೀಣ್ ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನು. ಅಲ್ಲದೇ ಜೀವ ಬೆದರಿಕೆಯನ್ನು ಹಾಕಿ ನೋಟಿಸ್ ನೀಡಿದ್ದನ್ನು ಪ್ರಶ್ನಿಸಿದ್ದನು.
ಈ ಘಟನೆಯನ್ನ ಸಾಗರ ವಕೀಲರ ಸಂಘಕ್ಕೆ ಕೆ.ವಿ ಪ್ರವೀಣ್ ಗಮನಕ್ಕೆ ತಂದಿದ್ದರು. ವಕೀಲರಿಗೆ ಜೀವ ಬೆದರಿಕೆ ಹಾಕಿದಂತ ಆರೋಪಿಯನ್ನು ಬಂಧಿಸುವಂತೆ ಸಂಘದ ಅಧ್ಯಕ್ಷ ಗಿರೀಶ್ ಗೌಡ ಅವರ ನೇತೃತ್ವದ ತಂಡವು ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಅವರಿಗೆ ಮನವಿ, ದೂರು ಸಲ್ಲಿಸಿತ್ತು. ಈ ದೂರು ಆಧರಿಸಿ ವಕೀಲ ಕೆ.ವಿ ಪ್ರವೀಣ್ ಗೆ ಜೀವ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದಂತ ಆರೋಪಿ ಗಣೇಶ್ ವಿರುದ್ಧ ಬಿಎನ್ ಎಸ್ ಕಾಯ್ದೆಯ ಸೆಕ್ಷನ್ 351(1), 352ರಡಿ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದರು.
ಬಂಧಿತ ಆರೋಪಿ ಗಣೇಶ್ ನನ್ನು ಸಾಗರದ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಮೂರ್ತಿ ದೀಪಾ ಅವರ ಮುಂದೆ ಹಾಜರುಪಡಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದಂತ ನ್ಯಾಯಮೂರ್ತಿ ದೀಪಾ ಅವರು, ಆರೋಪಿ ಗಣೇಶ್ ನನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದಾರೆ. ಈ ಮೂಲಕ ಕೋರ್ಟ್ ಆದೇಶದಂತೆ ನೋಟಿಸ್ ನೀಡಿದಂತ ವಕೀಲರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದಂತ ಆರೋಪಿಯನ್ನು ಜೈಲಿಗಟ್ಟಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
ಭಾರತದ ಹೆಮ್ಮೆಯ ಸೈನಿಕರಿಗೊಂದು ದೊಡ್ಡ ಸಲಾಂ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್