ಸೂರತ್: ಗುಜರಾತ್ನ ಸೂರತ್ನಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ(ISI) ಏಜೆಂಟ್ನೊಂದಿಗೆ ದೇಶದ ರಹಸ್ಯ ಮಾಹಿತಿ ಹಂಚಿಕೊಂಡಿದ್ದಕ್ಕಾಗಿ 32 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಆರೋಪಿಯನ್ನು ದೀಪಕ್ ಸಾಳುಂಕೆ ಎಂದು ಗುರುತಿಸಲಾಗಿದ್ದು, ಸೂರತ್ನ ಭುವನೇಶ್ವರಿ ನಗರದ ಯೋಗೇಶ್ವರ ಪಾರ್ಕ್ ಸೊಸೈಟಿಯ ನಿವಾಸಿಯಾದ ದೀಪಕ್ ಭಾರತೀಯ ಸೇನೆಯ ಮಾಹಿತಿಯನ್ನು ISI ಏಜೆಂಟ್ ಹಮೀದ್ ಜೊತೆ ಹಂಚಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಮೂಲಗಳ ಪ್ರಕಾರ ಆರೋಪಿಗಳು ಹಮೀದ್ ಅವರಿಂದ 75 ಸಾವಿರ ರೂ. ಪಡೆದುಕೊಂಡು ಸಾಯಿ ಫ್ಯಾಶನ್ ಎಂಬ ಹೆಸರಿನ ಜವಳಿ ಅಂಗಡಿಯನ್ನು ನಡೆಸುತ್ತಿದ್ದ. ಇದೇ ಅಂಗಡಿಯಲ್ಲೇ ಉಳಿದುಕೊಂಡಿದ್ದ ಏಜೆಂಟ್ಗಳು ಬೇಹುಗಾರಿಕೆ ಚಟುವಟಿಕೆ ನಡೆಸುತ್ತಿದ್ದರು. ದೀಪಕ್ ಇಬ್ಬರು ಪಾಕಿಸ್ತಾನಿ ಏಜೆಂಟ್ಗಳಾದ ಹಮೀದ್ ಮತ್ತು ಕಾಶಿಫ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಈ ಪಾಕಿಸ್ತಾನಿ ಏಜೆಂಟ್ಗಳೊಂದಿಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.
ಸೂರತ್ ಪೊಲೀಸ್ ಕಮಿಷನರ್ ಅಜಯ್ ತೋಮರ್ ಮಾತನಾಡಿ, “ಆರೋಪಿ ವಿರುದ್ಧ ದೇಶದ್ರೋಹದ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 32 ವರ್ಷದ ದೀಪಕ್ ಸಾಳುಂಕೆ ಫೇಸ್ಬುಕ್ನಲ್ಲಿ ಪೂನಂ ಶರ್ಮಾ ಎಂಬ ಹೆಸರಿನಲ್ಲಿ ನಕಲಿ ಐಡಿ ಹೊಂದಿದ್ದನು. ಈ ಮೂಲಕ ಪಾಕ್ ಏಜೆಂಟ್ ಹಮೀದ್ ಜೊತೆ ಸಂಪರ್ಕ ಬೆಳೆಸಿಕೊಂಡಿದ್ದ. ಜೂನ್ನಿಂದ ಇವರು ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ.
ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ RBI ಮಾಜಿ ಗವರ್ನರ್ ʻರಘುರಾಮ್ ರಾಜನ್ʼ | WATCH VIDEO