ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ದಲಿತ ಯುವತಿಯನ್ನು ಲಾಡ್ಜ್ ಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿ, ಆನಂತ್ರ ಮದುವೆಯಾಗದೇ ಪರಾರಿಯಾಗಿದ್ದಂತ ಆರೋಪಿಯನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರ ಠಾಣೆಯಲ್ಲಿ 24 ವರ್ಷದ ಯುವತಿಯೊಬ್ಬಳು ತನ್ನ ಮೇಲೆ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ನಡೆಸಿ, ಬಳಿಕ ಪರಾರಿಯಾಗಿದ್ದಾನೆ ಎಂಬುದಾಗಿ ದೂರು ನೀಡಿದ್ದರು. ಈ ದೂರು ಆಧರಿಸಿ ನಲೆಮಂಗಲ ಟೌನ್ ಠಾಣೆಯ ಪೊಲೀಸರು ಆರೋಪಿ ಶ್ರೀಕಾಂತ್ ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿ ಶ್ರೀಕಾಂತ್ 24 ವರ್ಷದ ದಲಿತ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಲಾಡ್ಜ್ ಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದನಂತೆ. ಆ ಬಳಿಕ ಮದುವೆಯಾಗಲು ನಿರಾಕರಿಸಿದ್ದನಂತೆ. ಅಲ್ಲದೇ ನಾಪತ್ತೆಯಾಗಿದ್ದಾಗಿ ಯುವತಿ ಆರೋಪಿಸಿದ್ದಾಳೆ. ಈ ಹಿನ್ನಲೆಯಲ್ಲಿ ನೆಲಮಂಗಲ ಟೌನ್ ಠಾಣೆಯ ಪೊಲೀಸರು ಆರೋಪಿ ಶ್ರೀಕಾಂತ್ ನನ್ನು ಅರೆಸ್ಟ್ ಮಾಡಿದ್ದಾರೆ.
BREAKING: ರಾಜ್ಯದಲ್ಲಿ ‘ದೈಹಿಕ ಶಿಕ್ಷಕ’ನಿಂದಲೇ ಕೀಚಕ ಕೃತ್ಯ: 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ
ವಿಕ್ರಂ ಗೌಡ ಎನ್ ಕೌಂಟರ್ ನಕಲಿ ಅಲ್ಲ; ನ್ಯಾಯಾಂಗ ತನಿಖೆ ಅವಶ್ಯಕತೆ ಇಲ್ಲ – ಸಚಿವೆ ಲಕ್ಷ್ಮೀ ಹೆಬ್ಬಾಳಕರ್
BREAKING: ಬಾಣಂತಿಯರ ಸಾವು ಕೇಸ್: ‘ಡ್ರಗ್ ಕಂಟ್ರೋಲರ್ ಉಮೇಶ್’ ಸಸ್ಪೆಂಡ್ – ಸಿ.ಎಂ.ಸಿದ್ದರಾಮಯ್ಯ