ಬೆಂಗಳೂರು: ರಾಜ್ಯದ ಜನರು ಬೆಚ್ಚಿ ಬೀಳುವಂತೆ ದೈಹಿಕ ಶಿಕ್ಷಕನೊಬ್ಬನು ತನ್ನ ವಿದ್ಯಾರ್ಥಿನಿಯ ಮೇಲೆಯೇ ಕೀಚಕ ಕೃತ್ಯವೆಸಗಿದ್ದಾನೆ. 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವಂತ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಬಾಸ್ ಪೇಟೆಯಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ದಬಾಸ್ ಪೇಟೆಯಲ್ಲೇ ಇಂತದ್ದೊಂದು ಘಟನೆ ನಡೆದಿದೆ. ತನ್ನ ಶಾಲೆಯ 17 ವರ್ಷದ ಬಾಲಕಿಯನ್ನು ನಂಬಿಸಿ ದೇವರಾಯ ದುರ್ಗಕ್ಕೆ 22 ವರ್ಷದ ದೈಹಿಕ ಶಿಕ್ಷಕ ಕರೆದೊಯ್ದಿದ್ದಾನೆ. ಆ ನಂತ್ರ ಅಲ್ಲಿಂದ ತುಮಕೂರಿಗೆ ಕರೆದೊಯ್ದು ಲಾಡ್ಜ್ ಒಂದರಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಇಲ್ಲಿಗೆ ಸುಮ್ಮನಾಗದಂತ ನೀಚ ದೈಹಿಕ ಶಿಕ್ಷಕ ತನ್ನ ಮನೆಗೆ ಬಾಲಕಿಯನ್ನು ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ. ಈ ವಿಷಯ ಹೊರಗೆ ಹೇಳಿದ್ರೆ ಕೊಂದು ಬಿಡುವುದಾಗಿಯೂ ಹೆದರಿಸಿದ್ದಾನೆ. ದೈಹಿಕ ಶಿಕ್ಷಕನ ಕಾಟ ಹೆಚ್ಚಾದಂತೆ ಬಾಲಕಿ ಪೋಷಕರಿಗೆ ತಿಳಿಸಿದ್ದಾರೆ. ಇದೀಗ ಪೋಷಕರು ದಬಾಸ್ ಪೇಟೆ ಠಾಣೆಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ದೈಹಿಕ ಶಿಕ್ಷಕನನ್ನು ಬಂಧಿಸಲಾಗಿದೆ.
BIG Exclusive: ರಾಜ್ಯದಲ್ಲೊಬ್ಬ ಅಪರೂಪದ ‘ಪ್ರಾಂಶುಪಾಲ’ರಿವರು: ಇವರ ‘ಶುಚಿತ್ವ ಕಾರ್ಯ’ಕ್ಕೆ ಭಾರೀ ಮೆಚ್ಚುಗೆ
ವಿಕ್ರಂ ಗೌಡ ಎನ್ ಕೌಂಟರ್ ನಕಲಿ ಅಲ್ಲ; ನ್ಯಾಯಾಂಗ ತನಿಖೆ ಅವಶ್ಯಕತೆ ಇಲ್ಲ – ಸಚಿವೆ ಲಕ್ಷ್ಮೀ ಹೆಬ್ಬಾಳಕರ್