ಹುಬ್ಬಳ್ಳಿ: ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಂತ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಆತನ ವಿರುದ್ಧ ಕೇಸ್ ದಾಖಲಿಸಿ ಕಾನೂನಿನ ಬಿಸಿ ಮುಟ್ಟಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಅಪ್ರಾಪ್ತ ಬಾಲಕನನ್ನು ಪುಸಲಾಯಿಸಿ, ಚಾಕಲೇಟ್ ಆಸೆ ತೋರಿಸಿ ಪದೇ ಪದೇ ಕರೆದೊಯ್ದು, ಅಸಭ್ಯವಾಗಿ ವ್ಯಕ್ತಿಯೊಬ್ಬ ವರ್ತಿಸುತ್ತಿದ್ದನಂತೆ. ಈ ಸಂಬಂಧ ಸ್ಥಳೀಯರು ಪೋಷಕರ ಗಮನಕ್ಕೆ ತಂದಿದ್ದರು.
ಪೋಷಕರು ಆರೋಪಿ ಸಿರಾಜ್(55) ಎಂಬಾತನಿಗೆ ಬುದ್ಧಿ ವಾದ ಹೇಳಿದಕ್ಕೆ ಪೋಷಕರಿಗೇ ಅವಾಜ್ ಹಾಕಿ ಬಾಲಕನನ್ನು ಕರೆದೊಯ್ದಿದ್ದನು. ಈ ಸಂಬಂಧ ಪೋಷಕರು ಹುಬ್ಬಳ್ಳಿ ಠಾಣೆಗೆ ತೆರಳಿ ದೂರು ನೀಡಿದ್ದರು.
ಪೋಷಕರು ನೀಡಿದ್ದಂತ ದೂರು ಆಧರಿಸಿ ಆರೋಪಿ ಸಿರಾಜ್ ನನ್ನು ಬಂಧಿಸಿರುವಂತ ಪೊಲೀಸರು ಆತನ ವಿರುದ್ಧ ಅಟ್ರಾಸಿಟಿ ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಥಿಯೇಟರ್‌ನಲ್ಲಿ IPL ಪಂದ್ಯಗಳ ಪ್ರಸಾರಕ್ಕೆ BCCIನೊಂದಿಗೆ ಪಿವಿಆರ್ ಐನಾಕ್ಸ್ ಒಪ್ಪಂದ | PVR-INOX