ಗಾಜಿಯಾಬಾದ್: ಯುವಕನೊಬ್ಬ ಆರು ವರ್ಷದ ಬಾಲಕಿ ಮೇಲೆ ಡಿಜಿಟಲ್ ರೇಪ್(Digital Rape) ಮಾಡಿರುವ ಘಟನೆ ಉತ್ತರ ಪ್ರದೇಶದ ಕನವಾನಿ ಪ್ರದೇಶದಲ್ಲಿ ನಡೆದಿದೆ. ಇದೀಗ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.
ಈ ಸಂಬಂಧ ದೂರು ನೀಡಿರುವ ಸಂತ್ರಸ್ತೆ ಬಾಲಕಿಯ ತಾಯಿ, ʻಶನಿವಾರ ರಾತ್ರಿ ತನ್ನ ಮಗಳ ಮೇಲೆ “ಡಿಜಿಟಲ್ ಅತ್ಯಾಚಾರ” (ಪುರುಷ ಜನನಾಂಗವನ್ನು ಹೊರತುಪಡಿಸಿ ದೇಹದ ಯಾವುದೇ ಭಾಗವನ್ನು ಬಳಸಿ ಬಲವಂತದ ಲೈಂಗಿಕ ಕ್ರಿಯೆ) ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ದೂರು ನೀಡಿದ ನಂತರ ಆರೋಪಿ ಅಜಯ್ ಅಲಿಯಾಸ್ ರಾಮ್ ನರೇಶ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಬಾಲಕಿಯ ತಂದೆ ಬದುಕಿಲ್ಲ. ತಾಯಿ ನರ್ಸ್ ಆಗಿ ಕೆಲಸ ಮಾಡುತ್ತಾರೆ. ಆಕೆಗೆ ರಾತ್ರಿ ಡ್ಯೂಟಿ ಇದ್ದುದರಿಂದ ಕೆಲಸಕ್ಕೆ ಹೋಗಿದ್ದರು. ಮಕ್ಕಳು ಮನೆಯಲಲೇ ಇದ್ದುದನ್ನು ಕಂಡ ಆರೋಪಿ ಬಾಲಕಿಯ ಮನವೊಲಿಸಿ ಹೊರಗೆ ಕರೆದೊಯ್ದು ಈ ದುಷ್ಕೃತ್ಯವೆಸಗಿದ್ದಾನೆ. ಬೇಳಗ್ಗೆ ಮನೆಗೆ ತಾಯಿ ಬಂದಾಗ ಬಾಲಕಿ ತನ್ನ ಮೇಲೆ ಆದ ಅತ್ಯಾಚಾರದ ಬಗ್ಗೆ ವಿವರಿಸಿದ್ದಾಳೆ.
ಅಜಯ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಎಬಿ (12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಡಿಜಿಟಲ್ ರೇಪ್(Digital Rape) ಎಂದರೇನು?
ಡಿಜಿಟಲ್ ಅತ್ಯಾಚಾರವು ಲೈಂಗಿಕ ಕಿರುಕುಳವನ್ನು ಇಂಟರ್ನೆಟ್ ಮೂಲಕ ಮಾಡಲಾಗಿದೆ ಎಂದು ಅರ್ಥವಲ್ಲ. ಡಿಜಿಟಲ್ ರೇಪ್ ಎಂಬ ಪದವು ಅಂಕೆ ಮತ್ತು ಅತ್ಯಾಚಾರ ಎಂಬ ಎರಡು ಪದಗಳನ್ನು ಸಂಯೋಜಿಸುವ ಮೂಲಕ ರೂಪುಗೊಂಡಿದೆ. ಇಂಗ್ಲಿಷ್ ನಿಘಂಟಿನಲ್ಲಿ ಅಂಕಿ ಬೆರಳು, ಹೆಬ್ಬೆರಳು, ಟೋ ಎಂದೂ ಕರೆಯುತ್ತಾರೆ. ಮಹಿಳೆಯ ಒಪ್ಪಿಗೆಯಿಲ್ಲದೆ ಪುರುಷ ತನ್ನ ಬೆರಳುಗಳು ಅಥವಾ ಹೆಬ್ಬೆರಳುಗಳನ್ನು ಬಳಸಿ ಅತ್ಯಾಚಾರ ಮಾಡಿದರೆ ಅದನ್ನು ಡಿಜಿಟಲ್ ರೇಪ್ ಎಂದು ಕರೆಯಲಾಗುತ್ತದೆ. ವಿದೇಶದಂತೆ ಭಾರತದಲ್ಲಿಯೂ ಇದಕ್ಕಾಗಿ ಕಾನೂನು ಮಾಡಲಾಗಿದೆ.
BIG NEWS : ರಾಜ್ಯದಲ್ಲಿ ಮತ್ತೆ `ಡೆಂಗ್ಯೂ’ ಆತಂಕ : ಒಂದೇ ವಾರದಲ್ಲಿ 195 ಮಂದಿಗೆ ಸೋಂಕು| Dengue Fever
BIGG NEWS : ಇಂದಿನಿಂದಲೇ `SC-ST’ ಮೀಸಲು ಹೆಚ್ಚಳ ಸುಗ್ರೀವಾಜ್ಞೆ ಜಾರಿ
BIG NEWS : ರಾಜ್ಯದಲ್ಲಿ ಮತ್ತೆ `ಡೆಂಗ್ಯೂ’ ಆತಂಕ : ಒಂದೇ ವಾರದಲ್ಲಿ 195 ಮಂದಿಗೆ ಸೋಂಕು| Dengue Fever