ಕೋಲ್ಕತ್ತಾ : ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ಮಧ್ಯಾಹ್ನ ಕೋಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜೆಯಲ್ಲಿ ಮಹಾ ಕಾರ್ನೀವಲ್ನಲ್ಲಿ ಬುಡಕಟ್ಟು ನೃತ್ಯಗಾರರೊಂದಿಗೆ ನೃತ್ಯ ಮಾಡಿದ್ದಾರೆ.
BREAKING NEWS : ಪಾಕ್ ಮಾಜಿ ಪ್ರಧಾನಿ ‘ಇಮ್ರಾನ್ ಖಾನ್’ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ
ಸಿಎಂ ಬ್ಯಾನರ್ಜಿಯವರು ನೃತ್ಯಗಾರರೊಂದಿಗೆ ಮತ್ತು ಬಂಗಾಳಿ ಧಾರಾವಾಹಿಗಳ ತಾರೆಗಳೊಂದಿಗೆ ಬುಡಕಟ್ಟು ಹಾಡಿಗೆ ಹೆಜ್ಜೆ ಹಾಕಿದರು. ಇವರ ಜೊತೆಗೆ ನಟ ಮತ್ತು ಟಿಎಂಸಿ ಶಾಸಕ ಜೂನ್ ಮಾಲಿಯಾ ಕೂಡ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.
2016 ರಿಂದ ಪ್ರತಿವರ್ಷ, ಕೋಲ್ಕತ್ತಾದ ರೆಡ್ ರೋಡ್ನಲ್ಲಿ ಐದು ದಿನಗಳ ಉತ್ಸವ ಹಾಗೂ ಮೆರವಣಿಗೆ ನಡೆಯುತ್ತಿದೆ. ಈ ವೇಳೆ ಅದ್ಭುತ ಕರಕುಶಲತೆಯನ್ನು ಪ್ರೇಕ್ಷಕರ ಮುಂದೆ ಪ್ರದರ್ಶಿಸಲಾಗುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷಗಳು ಕಾಲ ಕಾರ್ನೀವಲ್ ಅನ್ನು ನಿಷೇಧಿಸಲಾಗಿತ್ತು. ಈ ಕಾರ್ಯಕ್ರಮಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಯುನೆಸ್ಕೋ ಪ್ರತಿನಿಧಿಗಳು, ರಾಜತಾಂತ್ರಿಕರು ಮತ್ತು ಇತರರು ಭಾಗವಹಿಸುತ್ತಾರೆ.
#WATCH | West Bengal CM Mamata Banerjee dances with artists during Durga Puja Carnival in Kolkata. pic.twitter.com/WT4F6bpb3C
— ANI (@ANI) October 8, 2022
ಕೋಲ್ಕತ್ತಾದ ದುರ್ಗಾ ಪೂಜೆ ಆಚರಣೆಗಳಿಗೆ ಯುನೆಸ್ಕೋ ಅಮೂರ್ತ ಪರಂಪರೆಯ ಸ್ಥಾನಮಾನವನ್ನು ನೀಡಿದೆ. ಈ ವರ್ಷ ಯುನೆಸ್ಕೋ ಗೌರವವನ್ನು ಗುರುತಿಸಲು ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಕಾರ್ನಿವಲ್ಗಳನ್ನು ಆಯೋಜಿಸಲಾಗಿದೆ.
ಇದೇ ವೇಳೆ ದುರ್ಗಾ ವಿಗ್ರಹಗಳ ನಿಮಜ್ಜನದ ಸಮಯದಲ್ಲಿ ಹಠಾತ್ ಪ್ರವಾಹದಿಂದ ಸಾವನ್ನಪ್ಪಿದ ಎಂಟು ಜನರ ಸಾವಿಗೆ ಸಂತಾಪ ಸೂಚಿಸಿಲಾಯಿತು.
ಜೆಡಿಎಸ್ ಜನತಾ ಮಿತ್ರ ಸಮಾವೇಶ: ವಿಧಾನಸೌಧದಲ್ಲಿ ಚಂಬಲ್ ಕಣಿವೆ ದರೋಡೆಕೋರರು ಇದ್ದಾರೆಂದು ಮಾಜಿ HDK