ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಆರೋಗ್ಯ ಇಲಾಖೆ ನ.30 ರಿಂದ ಪುರುಷ ಸಂತಾನಹರಣ ಚಿಕಿತ್ಸಾ ಶಿಬಿರ ಏರ್ಪಡಿಸಿದ್ದು, ಚಿಕಿತ್ಸೆಗೆ ಸರ್ಕಾರದಿಂದ 1,100 ರೂ. ಪ್ರೋತ್ಸಾಹಧನ ನೀಡುತ್ತಿದೆ.
ಜನಸಂಖ್ಯಾ ನಿಯಂತ್ರಣಕ್ಕಾಗಿ ಹುಬ್ಬಳ್ಳಿ ಆರೋಗ್ಯ ಇಲಾಖೆಯಿಂದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ನವೆಂಬರ್ 30 ಹಾಗೂ ಡಿಸೆಂಬರ್ 1 ರಂದು ಪುರುಷ ಸಂತಾನಹರಣ ಚಿಕಿತ್ಸೆ ಬೃಹತ್ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಯಾವುದೇ ಹೊಲಿಗೆ, ಶಸ್ತ್ರಚಿಕಿತ್ಸೆ ಇಲ್ಲದೇ ಪುರುಷ ಸಂತಾನಹರಣ ಚಿಕಿತ್ಸೆ ನಡೆಸಲಾಗುತ್ತದೆ. ಚಿಕಿತ್ಸೆ ಮಾಡಿಸಿಕೊಂಡವರಿಗೆ ಸರ್ಕಾರದಿಂದ 1,100 ರೂ. ಸಹಾಯ ಧನ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.
ನೋಂದಣಿ ಮಾಡಿಕೊಳ್ಳಲು ಮೊಬೈಲ್ ಸಂಖ್ಯೆ: 7353921555, 9880907064 , 9481734230, ಸಂಪರ್ಕಿಸುವಂತೆ ಪ್ರಕಟಣೆ ಹೊರಡಿಸಲಾಗಿದೆ.
BIGG NEWS : ಡಿ.1 ರಿಂದ ‘ಸುರತ್ಕಲ್ ಟೋಲ್’ ಸಂಗ್ರಹವಿಲ್ಲ : ಜಿಲ್ಲಾಧಿಕಾರಿ ರವಿಕುಮಾರ್
BIGG NEWS ; “50 ಕೋಟಿ ಬಳಕೆದಾರರ ಡೇಟಾ ಸೋರಿಕೆಗೆ ಯಾವುದೇ ಎವಿಡೆನ್ಸ್ ಇಲ್ಲ” ; ವಾಟ್ಸಾಪ್ ಸ್ಪಷ್ಟನೆ |Data Leak