ಕೆಎನ್ಎನ್ಡಿಜಿಟಲ್ ಡೆಸ್ಕ್ : ಜುಲೈ 29ರ ಶುಕ್ರವಾರ ಕೇರಳದ ನಟ ಶರತ್ ಚಂದ್ರನ್ ಶವವಾಗಿ ಪತ್ತೆಯಾಗಿದ್ದು, ಅವರಿಗೆ 37 ವರ್ಷ ವಯಸ್ಸಾಗಿತ್ತು. ಇನ್ನು ಈ ನಟನ ಸಾವಿಗೆ ನಿಖರ ಕಾರಣವಿನ್ನೂ ತಿಳಿದುಬಂದಿಲ್ಲ.
ಶರತ್ ತಮ್ಮ ಚಿತ್ರ ಅಂಗಮಾಲಿ ಡೈರೀಸ್ ಮೂಲಕ ಪ್ರಸಿದ್ಧಿ ಪಡೆದಿದ್ದು, ಇತರ ಜನಪ್ರಿಯ ಚಿತ್ರಗಳಲ್ಲಿ ಕೂಡೆ, ಒರು ಮೆಕ್ಸಿಕನ್ ಅಪರಥ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಕೊಚ್ಚಿ ಮೂಲದವರಾದ ಶರತ್, ಈ ಹಿಂದೆ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು. ಅವರು ಡಬ್ಬಿಂಗ್ ಕಲಾವಿದರಾಗಿ ಚಲನಚಿತ್ರದಲ್ಲಿಯೂ ಕೆಲಸ ಮಾಡಿದರು. ಅನೀಸ್ಯ ಚಿತ್ರದ ಮೂಲಕ ಚಂದ್ರನ್ ಮಲಯಾಳಂ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು.
ಅಂದ್ಹಾಗೆ, ನಟ ಶರತ್ ತಂದೆ ಚಂದ್ರನ್ ಮತ್ತು ಲೀಲಾ ಅವರನ್ನ ಅಗಲಿದ್ದು, ಶ್ಯಾಮ್ ಚಂದ್ರನ್ ಎಂಬ ಸಹೋದರನೂ ಇದ್ದಾನೆ. ಇನ್ನು ಇವ್ರ ಅಂತ್ಯಕ್ರಿಯೆ ನಾಳೆ ನಡೆಯಲಿದೆ ಎಂದು ವರದಿಯಾಗಿದೆ.