ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಒಂದು ವರ್ಷ ಕಳೆಯುತ್ತಾ ಬಂದಿದೆ. ಅವರು ದೈಹಿಕವಾಗಿ ದೂರವಾದರೂ, ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ಜೀವಂತವಾಗಿದ್ದಾರೆ.
ಮಹಿಳೆಯರೇ ಹುಷಾರ್..! ಪಿರಿಯೆಡ್ಸ್ ಸಮಯದಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ನಿರ್ಲಕ್ಷಿಸದಿರಿ | Period problem
ಸರಳ ವ್ಯಕ್ತಿತ್ವದ ಪುನೀತ್ ಎಲ್ಲ ಚಿತ್ರರಂಗಗಳ ತಾರೆಯರ ಜೊತೆಗೂ ಉತ್ತಮ ಒಡನಾಟ ಹೊಂದಿದ್ದರು. ಅದಕ್ಕೆ ತಾಜಾ ಉದಾಹರಣೆ ಎಂಬಂತೆ ಮಲಯಾಳಂನ ಖ್ಯಾತ ನಟ ಜಯರಾಮ್, ಕನ್ನಡ ಹಾಡನ್ನು ಹಾಡುವ ಮೂಲಕ ತಮ್ಮ ಆಪ್ತ ಪುನೀತ್ಗೆ ಗೌರವ ಸಲ್ಲಿಸಿದ್ದಾರೆ.
ಮಹಿಳೆಯರೇ ಹುಷಾರ್..! ಪಿರಿಯೆಡ್ಸ್ ಸಮಯದಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ನಿರ್ಲಕ್ಷಿಸದಿರಿ | Period problem
ದೀಪಾವಳಿಯ ಪ್ರಯುಕ್ತ ಖಾಸಗಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಜಯರಾಮ್ ಪುನೀತ್ ರಾಜ್ಕುಮಾರ್ ಅವರನ್ನು ನೆನೆದಿದ್ದಾರೆ. ಬಲು ಬೇಗ ನಮ್ಮನ್ನಗಲಿದ ಸಹೋದರ ಪುನೀತ್ ರಾಜ್ಕುಮಾರ್ ಅವರಿಗೆ ಹಾಡನ್ನು ಅರ್ಪಿಸುತ್ತೇನೆ ಎಂದು ಪುನೀತ್ ನಟನೆಯ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಹಾಡನ್ನು ಹಾಡಿದ್ದಾರೆ. ಈ ಮೂಲಕ ಪ್ರೀತಿಯ ಪುನೀತ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಪುನೀತ್ ರಾಜ್ಕುಮಾರ್ ಅಪ್ಪು ಸರ್ ರವರ ನೆನಪಿನಲ್ಲಿ 'ಬೊಂಬೆ ಹೇಳುತೈತ್ತೆ' ಹಾಡು ಹಾಡಿದ ಮಲಯಾಳಂ ನಟ ಜಯರಾಮ್ ರವರು.❤️
ಮರೆಯಲಾಗದ ಮಾಣಿಕ್ಯ ನಮ್ಮ ಅಪ್ಪು ಸರ್ ❤️🙏@PuneethRajkumar#TheRajkumars #PuneethRajkumarLivesOn #Legend #Appu #PowerStar #PuneethRajkumar #DrPuneethRajkumar #JayaRam #PuneethFC pic.twitter.com/0XzC3DySEo— PuneethFC™ (@PuneethFC_17) October 26, 2022
ಈ ಖಾಸಗಿ ಕಾರ್ಯಕ್ರಮದಲ್ಲಿ ಖ್ಯಾತ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ, ಪ್ರಭು ಗಣೇಸನ್, ನಟಿ ನವ್ಯಾ ನಾಯರ್ ಸೇರಿದಂತೆ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದ ಹಲವು ತಾರೆಯರು ಭಾಗಿಯಾದ್ದರು.
ಜಯರಾಮ್ ಅವರ ‘ಬೊಂಬೆ ಹೇಳುತೈತೆ’ ಹಾಡಿಗೆ ತಾರೆಯಲ್ಲರೂ ತಲೆದೂಗಿ ಚಪ್ಪಾಳೆ ತಟ್ಟುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ.
ಮಹಿಳೆಯರೇ ಹುಷಾರ್..! ಪಿರಿಯೆಡ್ಸ್ ಸಮಯದಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ನಿರ್ಲಕ್ಷಿಸದಿರಿ | Period problem
ಪುನೀತ್ ಕನಸಿನ ಸಾಕ್ಷ್ಯಚಿತ್ರ ‘ಗಂಧದಗುಡಿ’ ಅಕ್ಟೋಬರ್ 28ಕ್ಕೆ ತೆರೆಗೆ ಬರಲಿದೆ. ಚಿತ್ರದ ಪ್ರೀಮಿಯರ್ ಶೋಗಳ ಮುಂಗಡ ಟಿಕೆಟ್ಗಳು ದಾಖಲೆ ಮಟ್ಟದಲ್ಲಿ ಮಾರಾಟವಾಗಿದ್ದು, ಪುನೀತ್ ಸಹಜವಾಗಿ ಕಾಣಿಸಿಕೊಂಡಿರುವ ಸಾಕ್ಷ್ಯಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ತಮ್ಮ ನೆಚ್ಚಿನ ನಟನ ‘ಗಂಧದಗುಡಿ’ ಸಾಕ್ಷ್ಯಚಿತ್ರವು ಹೊಸ ದಾಖಲೆ ನಿರ್ಮಿಸಲಿದೆ ಎಂದು ಅಭಿಮಾನಿಗಳು ಭರವಸೆಯಲ್ಲಿದ್ದಾರೆ. ಯಾವುದಕ್ಕೂ ಅಕ್ಟೋಬರ್ 28ರವರೆಗೆ ಕಾಯಬೇಕಿದೆ.
ಮಹಿಳೆಯರೇ ಹುಷಾರ್..! ಪಿರಿಯೆಡ್ಸ್ ಸಮಯದಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ನಿರ್ಲಕ್ಷಿಸದಿರಿ | Period problem