ಮಂಡ್ಯ : ಜಿಲ್ಲೆಯ ಮಳವಳ್ಳಿಯಲ್ಲಿ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಎಡಿಜಿಪಿ ಅಲೋಕ್ ಕುಮಾರ್ ‘ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ 10 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದ 14 ದಿನಗಳೊಳಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಮಂಡ್ಯ ಜಿಲ್ಲಾ ಪೊಲೀಸರಿಗೆ ಅಭಿನಂದನೆಗಳು, ಗೌರವಾನ್ವಿತ ಸಿಎಂಗೆ ಕೃತಜ್ಞತೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಘಟನೆ ಹಿನ್ನೆಲೆ
ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣ ನಡೆದಿದೆ. ಬಾಲಕಿಯನ್ನು ಟ್ಯೂಷನ್ ಗೆ ಕರೆಸಿಕೊಂಡ ಶಿಕ್ಷಕ ನಂತರ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಸಾಭೀತಾಗಿದೆ. ಟ್ಯೂಷನ್ ಗೆ ಬಂದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ನಂತರ ಪೋಷಕರಿಗೆ ಗೊತ್ತಾದರೆ ಅಪಾಯ ಎಂದು ಭಾವಿಸಿದ ಈತ ಬಾಲಕಿ ತಲೆಗೆ ರಾಡ್ ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ , ಬಳಿಕ ಸಂಪ್ ಗೆ ಎಸೆದಿದ್ದಾನೆ .
ಟ್ಯೂಷನ್ ಗಾಗಿ ಮನೆಯಿಂದ ಹೋಗಿದ್ದ ವಿದ್ಯಾರ್ಥಿನಿ ಬಳಿಕ ಮನೆಗೆ ವಾಪಸ್ ಬಂದಿರಲಿಲ್ಲ. ನಂತರ ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗದ ನಿರ್ಮಾಣ ಹಂತದ ಕಟ್ಟಡದ ಸಮೀಪದಲ್ಲಿ ಪರಿಶೀಲಿಸಿದಾಗ ನೀರಿನ ಸಂಪ್ ಒಳಗೆ ಬಾಲಕಿಯ ಶವ ಪತ್ತೆಯಾಗಿತ್ತು.
Case of Rape & murder of 10 yrs old girl child at Malavalli of Mandya District has been charge sheeted within 14 days of the incident
Kudos to Mandya District PoliceMaking efforts to ensure speedy Justice
Grateful to Hon’ble CM @BSBommai ,Hon’ble HM & @DgpKarnataka for support— alok kumar (@alokkumar6994) October 25, 2022
BIGG NEWS : ಅನಧಿಕೃತ ‘ಟ್ಯೂಷನ್ ಸೆಂಟರ್’ ನಡೆಸಿದ್ರೆ ಹುಷಾರ್ : ಶೀಘ್ರದಲ್ಲೇ ದಾಳಿ, ಕಠಿಣ ಕ್ರಮ
BIGG NEWS : ಇಂದು `AICC’ ಅಧ್ಯಕ್ಷರಾಗಿ `ಮಲ್ಲಿಕಾರ್ಜುನ ಖರ್ಗೆ’ ಪ್ರಮಾಣ ವಚನ ಸ್ವೀಕಾರ