ಶಿವಮೊಗ್ಗ: ಯಶ್ ಅವರ ಮಾತುಗಳು ನಿಜ. ಅವರು ಬಂದ ಹಾದಿ ವೀಕೆಂಡ್ ವಿತ್ ರಮೇಶ್ ಪಾಠವಾಗಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ನೀಡಿ. ದಯವಿಟ್ಟು ಶಿಕ್ಷಣದಲ್ಲಿ ಬದಲಾವಣೆ ತನ್ನಿ ಎಂಬುದಾಗಿ ಸಲಹೆ ಮಾಡಿ, ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಸೊರಬದ ಕೈಸೋಡಿಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕೈಸೋಡಿಯಲ್ಲಿ ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ರಾಕೇಶ್(21) ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪದವಿ ವ್ಯಾಸಂಗದ ಬಳಿಕ ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸಿದ್ದನು. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳುತ್ತಿದ್ದಂತ ರಾಕೇಶ್, ಮಾನಸಿಕ ಅನಾರೋಗ್ಯದಿಂದಲೂ ಬಳಲುತ್ತಿದ್ದನು ಎನ್ನಲಾಗುತ್ತಿದೆ.
ಇಂದು ಮುಂಜಾನೆ ಡೆತ್ ನೋಟ್ ಬರೆದಿಟ್ಟು ರಾಕೇಶ್ ಆತ್ಮಹತ್ಯೆಗೆ ಶರಣಾಗಿದ್ದನು. ವಿಷಯ ತಿಳಿದಂತ ಕುಟುಂಬಸ್ಥರು ಪಾರ್ಥೀವ ಶರೀರದ ಅಂತ್ಯಕ್ರಿಯೆಗೆ ಮುಂದಾಗಿತ್ತು. ಆದರೇ ಪೊಲೀಸರಿಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿ, ಅಂತ್ಯಕ್ರಿಯೆ ನಿಲ್ಲಿಸಿ ಆತ್ಮಹತ್ಯೆಗೆ ಶರಣಾದ ರಾಕೇಶ್ ಪಾರ್ಥೀವ ಶರೀರದ ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಅಂದಹಾಗೇ ಕೈಸೋಡಿಯ ಉಮೇಶ್ ಹಾಗೂ ಗೀತಾ ದಂಪತಿಗಳ ಕಿರಿಯ ಪುತ್ರ. ಇಬ್ಬರು ಹೆಣ್ಣು ಮಕ್ಕಳಿದ್ದು, ಓರ್ವ ಪುತ್ರಿಗೆ ವಿವಾಹವಾಗಿದೆ. ಇನ್ನೂ ಓರ್ವ ಪುತ್ರಿಗೆ ವಿವಾಹವಾಗ ಬೇಕಿದೆ. ರಾಕೇಶ್ ಕೊನೆಯ ಮಗನಾಗಿದ್ದು, ವ್ಯಾಸಂಗದಲ್ಲಿ ಮುಂದಿದ್ದಂತ ಆತ, ಸರ್ಕಾರಿ ಉದ್ಯೋಗ ಪಡೆಯೋ ತಯಾರಿಯಲ್ಲಿದ್ದನು.

ರಾಕೇಶ್ ಡೆತ್ ನೋಟ್ ನಲ್ಲಿ ಏನಿದೆ ಗೊತ್ತಾ?
ನಾನು ಸಾಯ್ತಾ ಇದೀನಿ. ಇದಕ್ಕೆ ಕಾರಣ ನಾನು online mental guidence ತಗಳ್ತಿದ್ದೆ. ಹಾಗೇ what’s app ಅಲ್ಲಿ ಯಾವುದೇ mental support ತಗೋಬೇಡಿ ಅಂತ ಎಲ್ಲಾ ವಿದ್ಯಾರ್ಥಿಗಳು ಹಾಗೂ ಜನರಿಗೆ ಹೇಳಿ. ನಾನು ಸುಳ್ಳು ಸುಳ್ಳಾಗಿ ನಮ್ ಅಮ್ಮನ ಒತ್ತಡಕ್ಕೆ odtidde ಅಂತಾ ತುಂಬಾ ಸ್ವಲ್ಪ ಜನರತ್ರ ಹೇಳಿದಿನಿ ಅದು ಸುಳ್ಳು.
Online mental support ಇಂದ ನನ್ನ ಸ್ವಂತ ಆಲೋಚನೆ, decision making ability, ಧೈರ್ಯ ಎಲ್ಲಾ ಕಡ್ಮೆ ಆಗಿತ್ತು. ಹಾಗೆ ಯಾವುದೇ friends ಜೋತೇನು sertirlilla. ಸದ್ಯಕ್ಕೆ ನನಗೇ ಸಾಯೋಕೆ ಬಿಟ್ರೆ ಏನಕ್ಕೂ ಧೈರ್ಯ ಬರದಹಾಗೆ ಆಗಿದೆ. ಯಾರೂ ಬೈಕೊಳ್ಬೇಡಿ ಆತ್ಮಹತ್ಯೆ ಮಾಡ್ಕೊಂಡ ಅಂತ ದೇವರು ನನ್ನ ಕರ್ಕೊಳೋಕೆ ready ಇದಾನೆ. ನಾನೇಳೋ msg ನಿಂದ ಬದಲಾವಣೆ ತನ್ನಿರಿ.
ನಾನೂ education system ನಲ್ಲಿ ಬದಲಾವಣೆ ತರೋಕೆ ಹೇಳ್ತೀನಿ. ಮಕ್ಕಳಲ್ಲಿ ಅವರ ಪ್ರತಿಬೇನ ಚಿಕ್ಕ ವಯಸ್ಸಿನಲ್ಲೇ ಗುರುತಿಸಿಕೊಳ್ಳಲು ಅವರಿಗೆ ಸಪೋರ್ಟ್ ಮಾಡ್ಕೊಡಿ. ಗುರುಕುಲದಲ್ಲಿ ದ್ರೋಣಾಚಾರ್ಯರು ಸಾಮರ್ಥ್ಯ ಗುರುತಿಸುವಂತೆ. ಯಾವುದೇ career irbodu ತುಂಬಾ ಚಿಕ್ಕದು ಇರ್ಬೋದು ಅದನ್ನೇ ಅವರು ದೊಡ್ಡ ಮಟ್ಟದಲ್ಲಿ ಮಾಡೋ ರೀತಿ education ಅಲ್ಲಿ ಹೇಳಿ ಕೊಡಿ. ಎಲ್ಲ ಮಕ್ಕಳು ಕುಷಿ ಇಂದ ಸಣ್ಣ ಕೆಲಸವಾದರೂ ಇಷ್ಟ ಪಟ್ಟು ಮಾಡುವಂಥದ್ದಾಗ್ಗಿರಲಿ. Yash ಅವರ ಮಾತುಗಳು ನಿಜ ಅವರ ಬಂದ ಹಾದಿ weekend with Ramesh ಪಾಠವಾಗಿ ಚಿಕ್ಕ ವಯ್ಸಿನಲ್ಲಿಯೇ ಮಕ್ಕಳಿಗೆ ನೀಡಿ.
ಕಷ್ಟ ಪಟ್ಟು ಓದಬೇಕು job ತಗೋಬೇಕು ಅಂತ ಚಿಕ್ಕ ಮಕ್ಕಳಲ್ಲಿ ಹೇಳ್ಬೇಡಿ. ಅವರ ಸಾಮರ್ಥ್ಯ ಬೆರೆ ಬೆರೆ ಇರತ್ತೆ. ಅದಕ್ಕೆ ಸಪೋರ್ಟ್ ಮಾಡಿ. ಅವರಿಗೆ ಏನಾದ್ರು ಮಾಡಪ್ಪ ನಿನಗೆ ಇಷ್ಟ ಇರೋವಂತದ್ದು ಅದನ್ನೇ ದೊಡ್ಡ ಮಟ್ಟದಲ್ಲಿ ಮಾಡಬಹುದು ಅಂತ ಹೇಳಿ ಕಳುಹಿಸಿ ಮಕ್ಕಳಿಗೆ. ಇದು 18 ವರ್ಷದೊಳಗೆ ಹೀಗೆ ಹೇಳಿ ಕೊಡಿ. ಹಣಕ್ಕಾಗಿ ಓದುವುದನ್ನು ನಿಲ್ಲಿಸಬೇಕು. Job dream ಇದ್ರೆ ಮಾತ್ರ ಓದಿಸಿ.
Life ಅಲ್ಲಿ successful ಆಗೋದು luck ಇದ್ರೆ ಮಾತ್ರ ಅಂತಾರೆ ಅದು ಸುಳ್ಳು. ಧರ್ಮದ ಪ್ರಕಾರ talent/ ಯೋಗ್ಯತೆ ಅಂತಾರೆ ಅವರು ಮಾತ್ರ successful ಆಗೋದು. ಅದು ಅರ್ಜುನನಲ್ಲಿ ಬಿಲ್ವಿದ್ಯೆ ಕಲೆ ಇದ್ದಿದ್ದನ್ನ ದ್ರೋಣಾಚಾರ್ಯ ಕಂಡು ಹಿಡಿದ ಹಾಗೆ ಒಬ್ಬೊಬ್ರಲ್ಲಿ ಒಂದೊಂದು ಕಲೆ ಇರೋಕೆ ಮಾತ್ರ ಸಾಧ್ಯ.
ನನ್ನ ಎಲ್ಲಾ ಸ್ನೇಹಿತರು, ಕುಟುಂಬಸ್ಥರು ನನ್ನ ಇಷ್ಟು ವರ್ಷ ಚೆನ್ನಾಗಿ ನೊಡ್ಕೊಂಡಿದಿರ ಈ ಜನ್ಮದಲ್ಲಿ ನನಗೆ ತೀರಿಸೋ ಭಾಗ್ಯ ಇಲ್ಲ. Thankyou ಎಲ್ಲರಿಗೂ. Talent/ ability ಅದು ಒಂದು ಧರ್ಮ. ಅದ್ರಿಂದ talent ಇಲ್ದೆ ಇರೋ ಬೇರೆ ಯಾವ್ದೇ ಕೆಲಸಕ್ಕೆ ಮಕ್ಕಳಿಗೆ ಒತ್ತಾಯಿಸಬೇಡಿ. ತಾಯಿ ಮೇಲಿನ ಅಪವಾದ ಸುಳ್ಳು ಹೇಳಿರೋದು. ಅವಳಿಗೆ ಏನು ಗೊತ್ತಿರಲ್ಲ.
ನಿಮ್ಮಲ್ಲಿ ಎಲ್ಲರಲ್ಲೂ ಕೆಲ್ಕೊಳೋದೇನೆಂದ್ರೆ. ಚಿಕ್ಕ ಆಸೆ ಇರೋ ಮಕ್ಕಳ ಮೇಲೆ ದೊಡ್ಡ ಆಸೆಗಳನ್ನು ಹೋರಿಸಬೇಡಿ. ಗುರುವಾಗಲಿ ತಂದೆ ತಾಯಿ ಯಾರೇ ಆಗಲಿ. ಮಕ್ಕಳಿಗೆ ಏನೂ ಗೊತ್ತಿರಲ್ಲ ಅದ್ಕೆ. ನಾನು online mental support ಇಂದ ಮಗು ತರ agidde 2023 ರಿಂದ ಈ support ತಗೊತಿದ್ದೆ. ಇದ್ರಿಂದ ತುಂಬಾ weak ಆಗಿದಿನಿ. ಎಲ್ಲರೂ don’t worry ಎನಾಗಲ್ಲ ನನಗೆ ಏನಕ್ಕೂ ಧೈರ್ಯ ಇಲ್ಲ. ಹಾಗೆ ಧರ್ಮ ಧೈರ್ಯ ಸಾಹಸ ಈ ರೂಲ್ ನ ಸಂಶೋದನೆ ಮಾಡಿ ಇದು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಗೊತ್ತಾಗಬೇಕು.
ನನ್ನ ಸಣ್ಣ ಅಕ್ಕ ರಕ್ಷಿತಾಳಿಗೆ ಮನೆ ಆಳ್ತನಕ್ಕೆ ನಮ್ಮೊರಲ್ಲೇ ಮದ್ವೆ ಮಾಡಿ ಅಂತ ಕೇಲ್ಕೊತಿನಿ. ಮತ್ತೇ ಈ ಬದಾವಣೆಗಳನ್ನ social mediadalli share ಮಾಡಿ. Please education ಅಲ್ಲಿ ಬದಲಾವಣೆ ತನ್ನಿ ಎಂಬುದಾಗಿ ಡೆತ್ ನೋಟ್ ನಲ್ಲಿ ರಾಕೇಶ್ ಉಲ್ಲೇಖಿಸಿ, ಆತ್ಮಹತ್ಯೆಗೆ ಶರಣಾಗಿದ್ದಾನೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..








