ಬೆಂಗಳೂರು: ರಾಜ್ಯ ಸರ್ಕಾರದಿಂದ ಮೇಜರ್ ಸರ್ಜರಿ ಎನ್ನುವಂತೆ ಬರೋಬ್ಬರಿ 144 ಗ್ರಾಮ ಆಡಳಿತ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಈ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವಂತ ಕೆಲಸವನ್ನು ಮಾಡಿದೆ.
ಇಂದು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವರ್ಗಾವಣೆ ಆದೇಶ ಹೊರಡಿಸಿದ್ದು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಖಂಡೇನಹಳ್ಳಿ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಮಹಂತೇಶ್ ಬಳ್ಳಾರಿ ಅವರನ್ನು ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಹೋಬಳಿಯ ಬೆಳಗೆರೆ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ.
ಹಿರಿಯೂರಿನ ಯಲ್ಲದಕೆರೆ ವೃತ್ತದ ಗ್ರಾಮ ಆಡಳಿತಾಧಿಕಾರಿ ಸಿ.ಚಿಕ್ಕಣ್ಣ ಅವರನ್ನು ಚಳ್ಳಕೆರೆ ತಾಲ್ಲೂಕಿನ ಕಾಪರಹಳ್ಳಿ ಕಂದಾಯ ವೃತ್ತದ ವಿಎಯಾಗಿ ವರ್ಗಾವಣೆ ಮಾಡಿದ್ದರೇ, ಚಿತ್ರದುರ್ಗ ತಾಲ್ಲೂಕು ಚಾನುಕೊಂಡ ವೃತ್ತದ ವಿಎ ಎಂ.ಎಸ್ ಶಿವಕುಮಾರ್ ಅವರನ್ನು ಚಿತ್ರದುರ್ಗ ತಾಲ್ಲೂಕು ಕಸಬಾ ಹೋಬಳಿಗೆ ವರ್ಗಾವಣೆ ಮಾಡಿದೆ.
ಶಿವಮೊಗ್ಗ ತಾಲ್ಲೂಕಿನ ಮಲವಗೊಪ್ಪ ವೃತ್ತದ ವಿಎ ಪ್ರಭಾಕರ ಎಎಂ ಅವರನ್ನು ಗೊಂದಿಚಟ್ನಹಳ್ಳಿ ವೃತ್ತಕ್ಕೆ, ಮೇಗರಹಳ್ಳಿ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಸಂದೀಪ ಹೆಚ್ ಅವರನ್ನು ಗಾಜನೂರು ವೃತ್ತಕ್ಕೆ, ಹಾಸನದ ಸಿಂಗಾಪುರ ವೃತ್ತದ ವಿಎ ಚಂದ್ರಶೇಖರ್ ಅವರನ್ನು ಹಿರಿಸಾವೆ ಹೋಬಳಿಯ ಪಿ.ಹೊಸಹಳ್ಳಿ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ.
ಹೀಗಿದೆ 144 ಗ್ರಾಮ ಆಡಳಿತ ಅಧಿಕಾರಿ ವರ್ಗಾವಣೆ ಪಟ್ಟಿ
ಸಾಮಾಜಿಕ ಮಾಧ್ಯಮಗಳ ಸವಾಲು ಎದುರಿಸುತ್ತಿರುವ ಪತ್ರಿಕೋದ್ಯಮ: ಸಿ.ಎಸ್. ಷಡಾಕ್ಷರಿ