ಬೆಂಗಳೂರು : ರಾಜ್ಯ ಸರ್ಕಾರ’ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ನಡೆಸಿದ್ದು, 4 ಹಿರಿಯ ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ರಾಜ್ಯದ 4 ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ
1) ಲಾಬುರಾಮ್, ಐಜಿಪಿ,
2) ಎನ್.ಸತೀಶ್ ಕುಮಾರ್, ಐಜಿಪಿ, ಉತ್ತರ ವಲಯ,
3) ರಮಣಗುಪ್ತಾ, ಡಿಐಜಿ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ
4) ಅನುಪಮ್ ಅಗರ್ವಾಲ್, ಡಿಐಜಿ, ಆಗ್ನೇಯ ವಲಯ
ನೇರ ನೇಮಕಾತಿ ಮತ್ತು ಮುಂಬಡ್ತಿ ಪ್ರಕ್ರಿಯೆಗೆ ನೀಡಲಾಗಿದ್ದ ಸುತ್ತೋಲೆ ವಾಪಸ್
ರಾಜ್ಯ ಸರ್ಕಾರವು ನೇರ ನೇಮಕಾತಿ ಮತ್ತು ಮುಂಬಡ್ತಿ ಪ್ರಕ್ರಿಯೆಗೆ ಇಲಾಖಾ ಮುಂಬಡ್ತಿ ಸಭೆ ಆಯೋಜಿಸದಂತೆ ಸೂಚನೆ ನೀಡಲಾಗಿದ್ದ ಸುತ್ತೋಲೆಯನ್ನು ಹಿಂಪಡೆದಿದೆ.ಈ ಕುರಿತು ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರ, ನೇರ ನೇಮಕಾತಿ ಮತ್ತು ಮೀಸಲಾತಿ ಅನ್ವಯವಾಗುವ ವೃಂದಗಳಿಗೆ ನೀಡಲಾಗುವ ಮುಂಬಡ್ತಿ ಪ್ರಕ್ರಿಯೆಗೆ ಇಲಾಖಾ ಮುಂಬಡ್ತಿ ಸಮಿತಿ ಸಭೆಯನ್ನು ಆಯೋಜಿಸದಂತೆ ಎಲ್ಲಾ ನೇಮಕಾತಿ ಪ್ರಾಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದ್ದು, ಸದರಿ ದಿನಾಂಕ: 18.11.2022ರ ಸುತ್ತೋಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.
ಮೇಲ್ಕಂಡ ಸೂಚನೆಗಳು ಎಲ್ಲಾ ಸ್ವಾಯತ್ತ ಸಂಸ್ಥೆಗಳು/ ವಿಶ್ವವಿದ್ಯಾಲಯಗಳು/ ಸಾರ್ವಜನಿಕ ಉದ್ಯಮ/ ಆಯೋಗ ನಿಗಮ ಮಂಡಳಿಗಳು ಮತ್ತು ಸರ್ಕಾರದಿಂದ ಅನುದಾನವಡೆಯುವ ಸಂಸ್ಥೆಗಳಿಗೂ ಸಹ ಅನ್ವಯಿಸುತ್ತದೆ.
Good News : ‘ಕೇಂದ್ರ ಸರ್ಕಾರ’ದಿಂದ ಬಂಪರ್ ಆಫರ್ ; ತಿಂಗಳಿಗೆ 50,000 ಗಳಿಸೋ ಅವಕಾಶ, ಈಗಲೇ ಅರ್ಜಿ ಸಲ್ಲಿಸಿ
ಅತ್ತೆ-ಸೊಸೆ ಬಾಂಧವ್ಯ ಚೆನ್ನಾಗಿರಬೇಕೇ? ಹಾಗಾದ್ರೆ ಮೊದಲು ಇದನ್ನ ತಿಳಿದುಕೊಳ್ಳಿ| Relationship Tips
‘ಸಹಕಾರ ಸಂಘ’ಗಳ ಸದಸ್ಯರಿಗೆ ಗುಡ್ ನ್ಯೂಸ್: ಜ.31ರವರೆಗೆ ‘ಯಶಸ್ವಿನಿ ಯೋಜನೆ’ಗೆ ನೊಂದಣಿಗೆ ಅವಧಿ ವಿಸ್ತರಣೆ