ಕುಪ್ವಾರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮಾದಕವಸ್ತುಗಳ ಕಳ್ಳಸಾಗಣೆ ದಂಧೆ ವಿರುದ್ಧ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆದಿದ್ದಾರೆ. ಕುಪ್ವಾರ ಮತ್ತು ಬಾರಾಮುಲ್ಲಾ ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಐವರು ಪೊಲೀಸರು ಸೇರಿದಂತೆ 17 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಕುಪ್ವಾರ ಪಟ್ಟಣ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಸಕ್ರಿಯವಾಗಿರುವ ಕೆಲವು ಡ್ರಗ್ ಪೆಡ್ಲರ್ಗಳನ್ನು ಗುರುತಿಸಲಾಗಿತ್ತು. ಯೋಜನೆ ರೂಪಿಸಿ ಕಳ್ಳಸಾಗಣೆ ದಂಧೆ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸ,ರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದವರನ್ನು ಬಂಧಿಸಿದ್ದಾರೆ.
ಬಂಧತರಲ್ಲಿ 5 ಪೊಲೀಸರು, ರಾಜಕೀಯ ಕಾರ್ಯಕರ್ತ, ಗುತ್ತಿಗೆದಾರ, ಅಂಗಡಿಯವ ಸೇರಿದ್ದಾರೆ. ಅವರಿಂದ 2 ಕೆ.ಜಿ ಹೆರಾಯಿನ್ ಹಾಗೂ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಕಾಶ್ಮೀರ ಕಣಿವೆಗೆ ಮಾದಕವಸ್ತುಗಳನ್ನು ಕಳ್ಳಸಾಗಾಣೆ ಮಾಡುವಲ್ಲಿಪಾಕಿಸ್ತಾನ ಮೂಲದ ಭಯೋತ್ಪಾದಕ ಹ್ಯಾಂಡ್ಲರ್ಗಳ ನೇರ ಪಾಲ್ಗೊಳ್ಳುವಿಕೆ ಇರುವುದಾಗಿ ಜೆ & ಕೆ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Covid19: ಮುಂದಿನ ದಿನಗಳಲ್ಲಿ ಅಗತ್ಯಬಿದ್ದರೇ ಕಠಿಣ ಕ್ರಮ ಜಾರಿ – ಸಚಿವ ಸುಧಾಕರ್
BIGG NEWS: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳ ಭೀತಿ; ನಾಳೆ ಬೆಂಗಳೂರಿನಲ್ಲಿ ತುರ್ತು ಸಭೆ; ಸಚಿವ ಆರ್. ಅಶೋಕ್