ಬೆಂಗಳೂರು: ‘ಮಜಾ’ರಾವ್ ಸ್ವಿಮ್ಮಿಂಗ್ ‘ಪೂಲ್ ಮಿನಿಸ್ಟರ್’ ದಿನೇಶ್ ಗುಂಡೂರಾವ್ ಎದ್ದೇಳಿ… ಗಾಂಧಿನಗರವನ್ನು ‘ಗುಂಡಿ ನಗರ’ ಮಾಡಿರುವ ಮಿಸ್ಟರ್ ‘ಗುಂಡಿ’ರಾವ್; ನೀವು ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡುತ್ತಾ ಆರೋಗ್ಯ ಇಲಾಖೆಯನ್ನೇ ಐಸಿಯುನಲ್ಲಿಟ್ಟಿದ್ದೀರಲ್ಲವೇ ಈ ಸಾಧನೆಗೆ ಯಾವ ಪ್ರಶಸ್ತಿ, ಕಿರೀಟ ಕೊಡಬೇಕು? ಎಂಬುದಾಗಿ ಜೆಡಿಎಸ್ ಪ್ರಶ್ನಿಸಿದೆ.
ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಹದಗೆಟ್ಟ ಆರೋಗ್ಯ ಇಲಾಖೆಯ ಸಚಿವರೇ.. ಜನರಿಗೆ ಉತ್ತಮ ಆರೋಗ್ಯ, ಚಿಕಿತ್ಸೆ ಸೌಲಭ್ಯ ಕಲ್ಪಿಸಲು ಕೈಲಾಗದೇ ಬೆಂಗಳೂರನ್ನು ‘ಡೆಂಘೀಯೂರು’ ಮಾಡಿದ ಭ್ರಷ್ಟ ಸರ್ಕಾರ ನಿಮ್ಮದು ಎಂದು ವಾಗ್ಧಾಳಿ ನಡೆಸಿದೆ.
ಭ್ರಷ್ಟಚಾರದ ಆರೋಪದಲ್ಲಿ ಪ್ರಾಸಿಕ್ಯೂಷನ್ ಎದುರಿಸುತ್ತಿರುವ ಮೂಡರಾಮಯ್ಯನ ಪರವಾಗಿ ಊಳಿಡುತ್ತಾ ನಿಮ್ಮ ನರಿಬುದ್ಧಿ ಪ್ರದರ್ಶನ ಮಾಡುತ್ತಿದ್ದೀರಿ ಎಂದು ಕಿಡಿಕಾರಿದೆ.
ಮುಖ್ಯಮಂತ್ರಿಗಳಿಗೆ “ವೈಟ್ನರ್” ಸಪ್ಲೈ ಮಾಡುವುದನ್ನು ಬಿಟ್ಟು ನಿಮ್ಮ ಆರೋಗ್ಯ ಇಲಾಖೆ ಬಗ್ಗೆ ಇನ್ನಾದರೂ ಗಮನ ಹರಿಸಿ.. ನಿಮ್ಮನ್ನು ಆಯ್ಕೆ ಮಾಡಿದ ಜನರ ಪ್ರಾಣ ಉಳಿಸಿ.. ಅವರ ಋಣ ತೀರಿಸಿ ಅಂತ ಆಗ್ರಹಿಸಿದೆ.
'ಮಜಾ'ರಾವ್ ಸ್ವಿಮ್ಮಿಂಗ್ 'ಪೂಲ್ ಮಿನಿಸ್ಟರ್' @dineshgrao ಎದ್ದೇಳಿ… ಗಾಂಧಿನಗರವನ್ನು 'ಗುಂಡಿ ನಗರ' ಮಾಡಿರುವ ಮಿಸ್ಟರ್ 'ಗುಂಡಿ'ರಾವ್; ನೀವು ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡುತ್ತಾ ಆರೋಗ್ಯ ಇಲಾಖೆಯನ್ನೇ ಐಸಿಯುನಲ್ಲಿಟ್ಟಿದ್ದೀರಲ್ಲವೇ ಈ ಸಾಧನೆಗೆ ಯಾವ ಪ್ರಶಸ್ತಿ, ಕಿರೀಟ ಕೊಡಬೇಕು?
ಹದಗೆಟ್ಟ ಆರೋಗ್ಯ ಇಲಾಖೆಯ ಸಚಿವರೇ.. ಜನರಿಗೆ…
— Janata Dal Secular (@JanataDal_S) August 23, 2024
ಬೆಂಗಳೂರು ಜನತೆ ಗಮನಕ್ಕೆ: ಆ.25ರಂದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut