ಕೆಎನ್‌ ಎನ್‌ ನ್ಯೂಸ್‌ : ಈಗಾಗಲೇ ಸರ್ಕಾರ ಶುಚಿ ಕಾರ್ಯಕ್ರಮದಡಿಯಲ್ಲಿ ಹದಿಹರೆಯದ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ನೀಡಲಾಗಿದೆ. ಇದೀಗ ಮತ್ತೊಂದು ಹೊಸ ನಿಯಮ ಜಾರಿ ತರಲಾಗಿದೆ.

BIGG NEWS: ನನ್ನ ಮಗನ ಕೃತ್ಯ ನೋಡಿ ಶಾಕ್‌ ಆಯ್ತು- ಹಂತಕನ ತಾಯಿ ಬಸಮ್ಮಾ ಬೇಸರ

ಇಂದಿನಿಂದ ಮುಟ್ಟಿನ ಕಪ್‌ ಎಂದು ಕರೆಯಲ್ಪಡುವ ಮೆನ್ಸ್‌ಟ್ರುಯೆಲ್‌ ಕಪ್‌ಗಳನ್ನು ನೀಡಲಿದೆ.ಮುಟ್ಟಿನ ಕಪ್‌ ನೀಡುವ ಯೋಜನೆಗೆ ಇಂದು ಚಾಮರಾಜನಗರ ಜಿಲ್ಲೆಯಲ್ಲಿ ಚಾಲನೆ ನೀಡಲಾಗುತ್ತದೆ. ಈ ಉತ್ಪನ್ನವನ್ನು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಇದೀಗ ಈ ಯೋಜನೆಯ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ.

ಆರಂಭದಲ್ಲಿ ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಹದಿಹರೆಯದ ಹೆಣ್ಣುಮಕ್ಕಳಿಗೆ ಮುಟ್ಟಿನ ಕಪ್‌ ಬಳಕೆಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮವೂ ಆಗಬೇಕಿದೆ. ಈ ಯೋಜನೆಯ ಫಲಿತಾಂಶವನ್ನು ಅವಲೋಕಿಸಿ ಮುಂದಿನ ಹಂತದಲ್ಲಿ ಇತರೆ ಜಿಲ್ಲೆಗಳಿಗೂ ಮುಟ್ಟಿನ ಕಪ್‌ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಸರಕಾರ ಮಾಹಿತಿ ನೀಡಿದೆ.ವಿಶೇಷವೆಂದರೆ ಹದಿಹರೆಯದ ಹೆಣ್ಣುಮಕ್ಕಳ ನೈರ್ಮಲ್ಯಕ್ಕಾಗಿ ಇಂತಹ ಯೋಜನೆಯನ್ನು ಪರಿಚಯಿಸಿದ ಮೊದಲ ರಾಜ್ಯವೆಂಬ ಹೆಮ್ಮೆಗೆ ಕರ್ನಾಟಕ ಪಾತ್ರವಾಗಲಿದೆ. ಮೊದಲ ಹಂತದಲ್ಲಿ ಈ ಯೋಜನೆಯ ಲಾಭವನ್ನು ಸುಮಾರು ೧೦ ಸಾವಿರ ಫಲಾನುಭವಿಗಳು ಪಡೆಯಲಿದ್ದಾರೆ.

BIGG NEWS: ನನ್ನ ಮಗನ ಕೃತ್ಯ ನೋಡಿ ಶಾಕ್‌ ಆಯ್ತು- ಹಂತಕನ ತಾಯಿ ಬಸಮ್ಮಾ ಬೇಸರ

ಏನಿದು ಮುಟ್ಟಿನ ಕಪ್‌?

ಸ್ತ್ರೀಯರು ತಿಂಗಳ ಮುಟ್ಟಿನ ಸಮಯದಲ್ಲಿ ಬಳಸಬಹುದಾದ ಒಂದು ಪ್ರಾಡಕ್ಟ್‌. ಈಗಾಗಲೇ ಸ್ಯಾನಿಟರಿ ಪ್ಯಾಡ್‌, ಟ್ಯಾಂಪೂನ್‌ ಇತ್ಯಾದಿಗಳನ್ನು ಬಳಸುತ್ತಾರೆ. ಆದರೆ ಈ ಮುಟ್ಟಿನ ಕಪ್‌ ಅಷ್ಟು ಜನಪ್ರಿಯವಲ್ಲ. ಜನರಿಗೆ ಮುಟ್ಟಿನ ಕಪ್‌ ಅಥವಾ ಮುಟ್ಟಿನ ಬಟ್ಟಲಿನ ಕುರಿತು ತಿಳಿವಳಿಕೆಯ ಕೊರತೆಯೂ ಇದೆ ಎಂದು ತಜ್ಞರು ಹೇಳಿದ್ದಾರೆ.

ಮುಟ್ಟಿನ ಕಪ್‌ ಬಳಸುವುದು ಹೇಗೆ?

ಮಾಸಿಕ ಋತುಸ್ರಾವದ ಸಮಯದಲ್ಲಿ ಮುಟ್ಟಿನ ಕಪ್‌ ಬಳಸಬೇಕು. ಮುಟ್ಟಿನ ಕಪ್‌ ಮೃದುವಾಗಿರುತ್ತದೆ. ಇದನ್ನು ಇಂಗ್ಲಿಷ್‌ ಅಕ್ಷರದ ಸಿ ಆಕಾರದಲ್ಲಿ ಮಡುವಿ ಯೋನಿಯೊಳಗೆ ತೂರಿಸಬೇಕು ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಈ ಮೃದುವಾದ ಮುಟ್ಟಿನ ಕಪ್‌ ಅನ್ನು ಯೋನಿಯೊಳಗೆ ಸೇರಿಸಿದ ಬಳಿಕ ಅಲ್ಲಿ ನಿರ್ವಾತ ಸೃಷ್ಟಿಯಾಗಿ ಯೋನಿಯ ಆಕಾರಕ್ಕೆ ತಕ್ಕಂತೆ ಮುಟ್ಟಿನ ಕಪ್‌ ಅಗಲಗೊಳ್ಳುತ್ತದೆ ಅಥವಾ ತೆರೆದುಕೊಳ್ಳುತ್ತದೆ. ಮುಟ್ಟಿನ ಸಮಯದ ರಕ್ತಸ್ರಾವ ಈ ಕಪ್‌ನೊಳಗೆ ಶೇಖರಣೆಗೊಳ್ಳುತ್ತದೆ.

Share.
Exit mobile version