ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿದೇಶದಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ವಕೀಲರ ಒಂದು ಸಲಹೆ ಮೇರೆಗೆ ಮೇ ಹತ್ತರ ಒಳಗೆ ವಾಪಸ್ ಆಗಿ ಎಸ್ಐಟಿ ವಿಚಾರಣೆಗೆ ಹಾಜರಾಗಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮ ಮೇಲೆ ಆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗುವ ಮುಂಚೆಯೇ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ತೆರಳಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ವಿದೇಶದಲ್ಲಿ ಇದ್ದುಕೊಂಡೆ ದೆಹಲಿ ಹಾಗೂ ಬೆಂಗಳೂರಿನ ನುರಿತ ವಕೀಲರನ್ನು ಸಂಪರ್ಕಿಸಿ ಯಾವ ರೀತಿ ಕಾನೂನು ಹೋರಾಟ ಮಾಡಬೇಕೆಂಬುದರ ಕುರಿತು ಅಲ್ಲಿಂದಲೇ ವಕೀಲರಿಂದ ಸಲಹೆಯನ್ನು ಪಡೆದುಕೊಂಡಿದ್ದರು.

ಅಲ್ಲದೆ ಮೇ 15ರಂದು ವಿದೇಶದಿಂದ ವಾಪಸ್ ಆಗಲು ಟಿಕೆಟ್ ಬುಕ್ ಮಾಡಲಾಗಿತ್ತು. ಆದರೆ ಇದೀಗ ನುರಿತ ವಕೀಲರ ಸಲಹೆ ಮೇರೆಗೆ ಮೇ ಹತ್ತರ ಒಳಗಾಗಿ ವಿದೇಶದಿಂದ ವಾಪಸ್ ಆಗಿ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣ ಸಂಬಂಧ ತನಿಖೆಯನ್ನು ಕೈಗೆತ್ತಿಕೊಂಡಿರುವ ಎಸ್ಐಟಿ ತನಿಖೆಯನ್ನು ಸುರುಪುಗೊಳಿಸುತ್ತಿದ್ದಂತೆ ಹಾಸನದ ಆರ್‌ಸಿ ರಸ್ತೆಯಲ್ಲಿರುವ ಪ್ರಜ್ವಲ್ ರೇವಣ್ಣರ ಸಂಸದರ ನಿವಾಸಕ್ಕೆ ಪೊಲೀಸರು ಬೀಗ ಜಡೆದಿದ್ದಾರೆ. ಈಗಾಗಲೇ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರು ಕೇಸ್ ದಾಖಲಾಗಿದ್ದು ಇಂದು ಸಂತ್ರಸ್ತೆಯರನ್ನು ಕರೆದುಕೊಂಡು ಎಸ್ಐಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸಲಿದ್ದಾರೆ.

Share.
Exit mobile version