ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ನಿನ್ನೆ ದೇಶಕ್ಕೆ ಇಬ್ಬರು ರಾಷ್ಟ್ರ ಪಿತಾಮಹ ಹೇಳಿಕೆಗೆ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ರಾಷ್ಟ್ರಪಿತನನ್ನು ಯಾರೊಂದಿಗೂ ಹೋಲಿಸಲು ಸಾಧ್ಯವಿಲ್ಲ. ಬಿಜೆಪಿಯ ನವ ಭಾರತ ಎಂದರೆ ಕೆಲವೇ ಸ್ನೇಹಿತರನ್ನು ಶ್ರೀಮಂತರನ್ನಾಗಿ ಮಾಡುವುದು. ಉಳಿದ ಜನಸಂಖ್ಯೆಯು ದೀನದಲಿತರು ಮತ್ತು ಹಸಿವಿನಿಂದ ಉಳಿಯುತ್ತದೆ. ನಮಗೆ ಈ ‘ಹೊಸ ಭಾರತ’ ಅಗತ್ಯವಿಲ್ಲ ಎಂದು ಪಟೋಲೆ ತಿರುಗೇಟು ನೀಡಿದ್ದಾರೆ.
Father of nation can't be compared with anyone. Their (BJP) 'new India' is only about making few friends super-rich while rest of population remains downtrodden & hungry. We don't need this 'new India': Maha Congress pres Nana Patole on Amruta Fadnavis' 2 fathers of nation remark pic.twitter.com/mlsqlrcP1l
— ANI (@ANI) December 22, 2022
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ‘ನವ ಭಾರತದ ರಾಷ್ಟ್ರಪಿತ’ಎಂದು ಕರೆದು ವಿವಾದಕ್ಕೆ ಕಾರಣರಾಗಿದ್ದರು.
ನಾಗ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅಮೃತಾ, ಭಾರತಕ್ಕೆ ಇಬ್ಬರು ರಾಷ್ಟ್ರ ಪಿತಾಮಹರಿದ್ದಾರೆ. ಒಬ್ಬರು ಹಿಂದಿನ ಭಾರತಕ್ಕೆ ಸೇರಿದ ಮಹಾತ್ಮ ಗಾಂಧಿಯವರು. ಇನ್ನೊಬ್ಬರು ನವ ಭಾರತಕ್ಕೆ ಸೇರಿದ ಪ್ರಧಾನಿ ಮೋದಿಯವರು. ಗಾಂಧಿ ಭಾರತದ ‘ರಾಷ್ಟ್ರಪಿತ’ , ಪ್ರಧಾನಿ ನರೇಂದ್ರ ಮೋದಿ ನವ ಭಾರತದ ‘ರಾಷ್ಟ್ರಪಿತ’ ಎಂದು ಹೇಳಿಕೆ ನೀಡಿದ್ದರು.
BIG NEWS: ಭಾರತದ ಪಿತಾಮಹ ಪ್ರಧಾನಿ ಮೋದಿ: ಅಮೃತಾ ಫಡ್ನವೀಸ್ | India has two ‘rashtra pita’