ಬೆಂಗಳೂರು : ಇಂದು ರಾಜ್ಯಾದ್ಯಂತ ಮಹಾಶಿವರಾತ್ರಿ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚುವ ಸಾಧ್ಯತೆ ಇರಲಿದ್ದು ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಸಂಚಾರ ಪೊಲೀಸರು ಹಲವು ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ನಿಬಂಧನಿರ್ಬಂಧ ವಿಧಿಸಿದ್ದಾರೆ .
ಶೇ.60ರಷ್ಟು ಕನ್ನಡ ಸೂಚನಾ ಫಲಕ ನಿಯಮ:ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದ ಸಚಿವ ಶಿವರಾಜ ತಂಗಡಗಿ
ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರಿಂದ ಸಂಚಾರಿ ಮಾರ್ಪಾಡು ಮಾಡಿದ್ದೂ, ನಗರದಲ್ಲಿ ಇಂದು ಕೆಲವು ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ. ಜೀವನಹಳ್ಳಿ, ಚಾರ್ಲ್ಸ್ ಕ್ಯಾಬೇಜ್ ಮುಖ್ಯ ರಸ್ತೆ, ಬೈಯಪ್ಪನಹಳ್ಳಿ ರಸ್ತೆ, ಕಲ್ಲಲ್ಲಿ ಸ್ಮಶಾನದ ರಸ್ತೆ, ಗರುಡಚಾರ್ಯ ಪಾಳ್ಯ ಜಂಕ್ಷನ್, ರಾಯಣ್ಣ ಸರ್ಕಲ್, ಗೋಶಾಲ ರಸ್ತೆಯಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್ ಅವರಿಗೆ ಸಂಚಾರ ನಿರ್ಬಂಧಿಸಲಾಗಿದೆ.
‘ಶಿವರಾತ್ರಿ’:ಇಂದು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ರಾಜ್ಯ ಸರ್ಕಾರ ಸೂಚನೆ
ಮಧ್ಯಾಹ್ನ 12 ಗಂಟೆಯಿಂದ ಸಿಎಂಎಚ್ ರಸ್ತೆಯ ಆದರ್ಶ ಜಂಕ್ಷನ್ ನಿಂದ, ಶಾಂತಿ ಸಾಗರ ಜಂಕ್ಷನ್ ವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10:00 ವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
ಬಜಾರ್ ಸ್ಟ್ರೀಟ್, ಬೇಗಂ ಮಾಲ್ ನಿಂದ ರಾಮಯ್ಯ ಜಂಕ್ಷನ್ ವರೆಗೆ ಹಾಗೂ ಓಂ ಸರ್ಕಾರಿ ಕಾಲೇಜ್ ರಸ್ತೆ ಬೆಳಗ್ಗೆ 6 ರಿಂದ ನಾಳೆ ಬೆಳಿಗ್ಗೆ 6 ರವರೆಗೆ, ಅದೇ ರೀತಿ ಯಮಲೂರು ಓಂ ಶಕ್ತಿ ದೇವರಿಂದ, ಸರ್ಕಾರಿ ಶಾಲೆವರೆಗಿನ ರಸ್ತೆ ನಿರ್ಭಂಧಿಸಲಾಗಿದೆ. ಕೆಲ ರಸ್ತೆಗಳಲ್ಲಿ ನಿರ್ಬಂಧ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ವ್ಯವಸ್ಥೆ ಕಲ್ಪಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮತ್ತೆ ‘ಏಕವಚನದಲ್ಲಿ’ ವಾಗ್ದಾಳಿ ನಡೆಸಿದ ಸಂಸದ ಅನಂತ್ ಕುಮಾರ ಹೆಗ್ಡೆ
ಪರ್ಯಾಯ ಮಾರ್ಗ
ದೊಡ್ಡ ಗುಂಟೆ ಸರ್ಕಲ್ ಕ್ಯಾನ್ಸಿಂಗ್ ಟನ್ ರಸ್ತೆ ಮೂಲಕ ಬೈಯಪ್ಪನಹಳ್ಳಿ ಓವರ್ ಬ್ರಿಡ್ಜ್, ಹೂಡಿ ಕೃಷ್ಣ ಟೆಂಪಲ್, ಐಟಿಪಿಎಲ್ ರಸ್ತೆ ಬಿಎಮ್ ಶ್ರೀ ಜಂಕ್ಷನ್ ನಿಂದ ಆದರ್ಶ ಜಂಕ್ಷನ್ ವರೆಗೆ, ಬಜಾರ್ ಸ್ಟ್ರೇಟ್ ಸವಾರರಿಗೆ ಗುರುದ್ವಾರ ಜಂಕ್ಷನ್, ರಾಮಯ್ಯ ಜಂಕ್ಷನ್ ಸವಾರರಿಗೆ ಟ್ರಿನಿಟಿ ಜಂಕ್ಷನ್, ಪೊಯಮ್ ರಸ್ತೆ ಸವಾರಿಗೆ ಕೆಆರ್ ಪುರಂ ಎಕ್ಸ್ ಟೆನ್ಶನ್ ರಸ್ತೆ ಬಳಸುವಂತೆ ಮನವಿ ಮಾಡಲಾಗಿದೆ.
ಬೆಂಗಳೂರಿನಲ್ಲಿ ಇಂದು ವಾಹನ ನಿಲುಗಡೆಗೆ ನಿರ್ಬಂಧಿಸಲಾಗಿದ್ದು ಸಿಎಂ ಎಚ್ ರಸ್ತೆ ಆದರ್ಶ ಜಂಕ್ಷನ್ ಶಾಂತಿ ಸಾಗರ ರಸ್ತೆಯ ಎರಡು ಬದಿಯಲ್ಲಿ ಓಲ್ಡ್ ಏರ್ಪೋರ್ಟ್ ರಸ್ತೆಯ ಎರಡು ಬದಿ ಗುರುಗುಂಟೆಪಾಳ್ಯ ಸರ್ವಿಸ್ ರಸ್ತೆ ಮೆಜೆಸ್ಟಿಕ್ ಮಲ್ಲೇಶ್ವರಂ ಸಂಪಿಗೆ ರಸ್ತೆ ಹಾಗೂ ಮಿಲ್ಕ್ ಕಾರ್ನರ್ ಬಳಿ ವಾಹನಗಳ ನಿಲುವು ಕಡೆಗೆ ನಿರ್ಬಂಧ ವಿಧಿಸಲಾಗಿದೆ.