ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಗಾಂಧಿ ಮೈದಾನದಲ್ಲಿ ಆಗಸ್ಟ್.24ರ ಶನಿವಾರದಂದು ಅವ್ವ ಮಹಾಸಂತೆಯನ್ನು ಆಯೋಜಿಸಲಾಗುತ್ತಿದೆ. ಈ ಸಂತೆಯಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಮಹಿಳಾ ಉತ್ಪಾದಕರು ಆಗಮಿಸಲಿದ್ದು, ಗೃಹೋತ್ಪನ್ನಗಳು ಹಾಗೂ ಆಹಾರ ಪದಾರ್ಥಗಳು ಒಂದೆಡೆ ಲಭ್ಯವಾಗಲಿದೆ.
ಇಂದು ಸಾಗರ ತಾಲ್ಲೂಕು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಹಿತಿ ಹಂಚಿಕೊಂಡಂತ ಜೀವನ್ಮುಖಿ ಸಂಸ್ಥೆಯ ಎಂ.ವಿ ಪ್ರತಿಭಾ ಅವರು, ಜೀವನ್ಮುಖಿ ಹಾಗೂ ಚಕರ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರಿ ಸಂಘದಿಂದ ದಿನಾಂಕ 24-08-2024ರ ಶನಿವಾರದಂದು ಬೆಳಿಗ್ಗೆ 11 ಗಂಟೆಗೆ ಗಾಂಧಿ ಮೈದಾನದ, ನಗರಸಭೆ ಆವರಣದಲ್ಲಿ ಅವ್ವ ಮಹಾಸಂತೆ 2024 ಆಯೋಜಿಸಲಾಗುತ್ತಿದೆ ಎಂದರು.
ಅವ್ವ ಮಹಾಸಂತೆಯನ್ನು ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ರಿಸರ್ಚ್ ಅಂಡ್ ಆಕ್ಷನ್ (ಇಕ್ರಾ) ಬೆಂಗಳೂರು ಇದರ ವಿ.ಗಾಯತ್ರಿ ಉದ್ಘಾಟನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಸಾಗರ ಉಪವಿಭಾಧಿಕಾರಿ ಯತೀಶ್.ಆರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಗರ ನಗರಸಭೆ ಪೌರಾಯುಕ್ತ ನಾಗಪ್ಪ ಹೆಚ್.ಕೆ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಕೋವಿಡ್ ನಂತ್ರ ಜೀವನ್ಮುಖಿ ಸಂಸ್ಥೆಯನ್ನು ಆರಂಭಿಸಲಾಗಿತ್ತು. ಸಮಾಜಕ ಕಟ್ಟ ಕಡೆಯ ಮಹಿಳೆಯರು ಮುಂದೆ ಬರಬೇಕು ಎಂಬುದು ಇದರ ಹಿಂದಿನ ಉದ್ದೇಶವಾಗಿದೆ. 10ನೇ ಅವ್ವ ಮಹಾಸಂತೆಯ ಬಳಿಕ 11ನೇ ಮಹಾಸಂತೆಯನ್ನು ಆಗಸ್ಟ್.24ರಂದು ಆಯೋಜಿಸಲಾಗುತ್ತಿದೆ. 28 ಮಳಿಗೆಗಳಲ್ಲಿ ರಾಜ್ಯ ಹೊರರಾಜ್ಯದ ಮಹಿಳೆಯರು ಸ್ವಉತ್ಪನ್ನಗಳನ್ನು ಪ್ರದರ್ಶಿಸಿ, ಮಾರಾಟ ಮಾಡಲಿದ್ದಾರೆ ಎಂದರು.
ಸಿಕ್ಕಿಂನ ಉತ್ಪನ್ನಗಳು, ಧಾರವಾಡ, ಶಿವಮೊಗ್ಗ, ಮಂಗಳೂರು, ಶಿಕಾರಿಪುರ, ಶಿರಸಿ, ಹೆಗ್ಗೋಡು ಸೇರಿದಂತೆ ವಿವಿಧೆಡೆಯಿಂದ ಮಹಿಳೆಯರು ಗೃಹ ಉತ್ಪನ್ನಗಳನ್ನು ಸ್ಟಾಲ್ ಗಳಲ್ಲಿ ಮಾರಾಟ ಮಾಡಲಿದ್ದಾರೆ. ದೇಸಿ ತಿನಿಸಿನ ರುಚಿಯನ್ನು ಕೂಡ ಅವ್ವ ಮಹಾಸಂತೆಯಲ್ಲಿ ಭಾಗಿಯಾಗುವವರಿಗೆ ಉಣಬಡಿಸಲಿದ್ದಾರೆ. ಸಾಗರ ತಾಲ್ಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು.
ಅವ್ವ ಮಹಾಸಂತೆ-2024ರ ವಿಶೇಷತೆಗಳು
– ಸ್ಥಳದಲ್ಲೇ ಸೇವಿಸಬಹುದಾದ ರುಚಿರುಚಿಯಾದ ಶುದ್ಧದೇಸಿ ತಿನಿಸುಗಳು.
-ಮರದ ಗಾಣದ ಶುದ್ಧವಾದ ಶೇಂಗಾ ಮತ್ತು ಕೊಬ್ಬರಿಎಣ್ಣೆ, ಜೇನುತುಪ್ಪ, ಜೋನಿ ಬೆಲ್ಲ.
– ವೈವಿಧ್ಯಮಯ ಸಿರಿಧಾನ್ಯದ ಉತ್ಪನ್ನಗಳು.
– ಮಣ್ಣಿನ, ಲೋಹದ, ಬಟ್ಟೆಯ ಆಕರ್ಷಕ ವಿನ್ಯಾಸದ ಆಭರಣಗಳು, ಅಲಂಕಾರಿಕ ವಸ್ತುಗಳು, ಕೇಶವಿನ್ಯಾಸದ ಉತ್ಪನ್ನಗಳು.
ಬಾಳೆನಾರಿನ ವೈವಿಧ್ಯಮಯ ಉತ್ಪನ್ನಗಳು.
– ಹತ್ತಿ ಮತ್ತು ಉಣ್ಣೆಯ ಉತ್ಪನ್ನಗಳು.
– ಅಗರಬತ್ತಿ, ಶ್ರೀಗಂಧದ ಹಾರಗಳು.
– ಮಲೆನಾಡಿನ ವಿಶೇಷ ಉಪ್ಪಿನಕಾಯಿ, ಹಪ್ಪಳಗಳು ಇತ್ಯಾದಿ…
-ಉಡುಗೊರೆಗಳಿಗೆ ಹಾಗೂ ಗೃಹೋಪಯೋಗಕ್ಕೆ ವಿಶೇಷ ಆಕರ್ಷಕ ವಸ್ತುಗಳು. ಸೌಂದರ್ಯವರ್ಧಕಗಳು, ಬಿದಿರಿನ ಕೈ ಉತ್ಪನ್ನಗಳು.
– ಚರಕ ಸಂಸ್ಥೆಯ ಕೈಮಗ್ಗ ಹಾಗು ನೈಸರ್ಗಿಕ ಬಣ್ಣಗಾರಿಕೆಯ ವೈವಿಧ್ಯಮಯ ಉಪಯುಕ್ತ ಉತ್ಪನ್ನಗಳು ರಿಯಾಯಿತಿ ದರದಲ್ಲಿ.
– ಎರಕದ ಕಾವಲಿಗಳು, ಪುಸ್ತಕಗಳು, ಅಲಂಕಾರಿಕ ಕುಂಡಗಳು, ಗಿಡಗಳು.
– ಹೆಣ್ಣು ಮಕ್ಕಳು ಋತುಚಕ್ರದಲ್ಲಿ ಬಳಸಬಹುದಾದ ಸುರಕ್ಷಿತ ಮತ್ತು ನೈಸರ್ಗಿಕ ಪ್ಯಾಡ್‌ಗಳು, ಕಪ್‌ಗಳು, ಒಳಉಡುಪುಗಳು ಇತ್ಯಾದಿ.
– ಪರಿಸರ ಸ್ನೇಹಿ ಪಿಕ್ನಿಕ್ ಬುಟ್ಟಿಗಳು, ಬಿದಿರಿನ ಪರ್ಸ್ ಮತ್ತು ಬ್ಯಾಗ್‌ಗಳು ಸೇರಿದಂತೆ ಇತ್ಯಾದಿ ಪರಿಸರಸ್ನೇಹಿ ಉತ್ಪನ್ನಗಳು
– ಸೀರೆಗಳು, ದೊಡ್ಡವರ ಮತ್ತು ಮಕ್ಕಳ ಉಡುಪುಗಳು ಇತ್ಯಾದಿ.
ಅವ್ವ ಮಹಾಸಂತೆಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಬಳಕೆ ಮಾಡುವುದಿಲ್ಲ. ಫ್ಲೆಕ್ಸ್ ಕೂಡ ಯೂಸ್ ಮಾಡುತ್ತಿಲ್ಲ. ಬಟ್ಟೆಯಿಂದ ಮಾಡಿದಂತ ಬ್ಯಾಗ್ ಗಳನ್ನು ಬಳಕೆ ಮಾಡಲಾಗುತ್ತಿದೆ. ಗ್ರಾಹಕರು ಖರೀದಿಸುವಂತ ವಸ್ತುಗಳನ್ನು ಕೊಂಡೊಯ್ಯುಲು ಬಟ್ಟೆ ಬ್ಯಾಗ್ ನೀಡಲಾಗುತ್ತದೆ. ಬನ್ನಿ ಅವ್ವ ಮಹಾಸಂತೆಯನ್ನು ಯಶಸ್ವಿಗೊಳಿಸಿ. ಮಹಿಳೆಯರ ಸ್ವಾಭಿಮಾನಿ ನಡಿಗೆಗೆ ಜೊತೆಯಾಗಿ ಅಂತ ಕರೆ ನೀಡಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
‘ಶರಾವತಿ ನದಿ ನೀರು’ ಉಳಿವಿಗಾಗಿ ‘ಪಕ್ಷಾತೀತ ಹೋರಾಟ’: ಮಾಜಿ ಸಚಿವ ಹರತಾಳು ಹಾಲಪ್ಪ
BIG NEWS : ರಾಜ್ಯದಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡಿದ್ರೆ 2 ಲಕ್ಷ ದಂಡ ಜೊತೆಗೆ 7 ವರ್ಷ ಜೈಲು ಶಿಕ್ಷೆ ಫಿಕ್ಸ್
Relationship : ನಿಮ್ಮ ಜೀವನ ‘ಸಂಗಾತಿ’ಯೊಂದಿಗಿನ ಸಂಬಂಧವನ್ನು ಬಲಪಡಿಸಲು ನೀವು ಬಯಸಿದರೆ, ಇದನ್ನು ಮಾಡಿ…!