ನವದೆಹಲಿ:35 ವರ್ಷದ ನೀಲಂ ಶಿಂಧೆ ಅವರಿಗೆ ಫೆಬ್ರವರಿ 28ರ ಶುಕ್ರವಾರ ವೀಸಾ ಸಂದರ್ಶನಕ್ಕಾಗಿ ಮುಂಬೈನಲ್ಲಿರುವ ಅಮೆರಿಕ ರಾಯಭಾರ ಕಚೇರಿಯಿಂದ ಕರೆ ಬಂದಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ವಿಷಯವನ್ನು ಕೈಗೆತ್ತಿಕೊಂಡ ನಂತರ, ವೀಸಾ ನೀಡುವ ಔಪಚಾರಿಕತೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಅಮೆರಿಕದ ಕಡೆಯವರು ಭರವಸೆ ನೀಡಿದ್ದಾರೆ.
ಮಹಾರಾಷ್ಟ್ರದ ಸತಾರಾ ಮೂಲದ ಶಿಂಧೆ ಅವರು 10 ದಿನಗಳ ಹಿಂದೆ ಕ್ಯಾಲಿಫೋರ್ನಿಯಾದಲ್ಲಿ ಕಾರು ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದರು ಮತ್ತು ಅಂದಿನಿಂದ ಕೋಮಾದಲ್ಲಿದ್ದರು. ಯುಎಸ್ಗೆ ವೀಸಾ ಪಡೆಯಲು ಅವರ ಕುಟುಂಬವು ಕೇಂದ್ರದ ಸಹಾಯವನ್ನು ಕೋರಿತ್ತು.
ನೀಲಂ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದು, ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿದ್ದಳು ಎಂದು ನೀಲಂ ಅವರ ತಂದೆ ತಾನಾಜಿ ಶಿಂಧೆ ಹೇಳಿದ್ದಾರೆ.
ಫೆಬ್ರವರಿ 14 ರಂದು ನೀಲಂ ಅವರು ಸಂಜೆ ವಾಕಿಂಗ್ ಮಾಡುತ್ತಿದ್ದಾಗ ಅಪಘಾತಕ್ಕೆ ಒಳಗಾಗಿದ್ದರು ಎಂದು ಶಿಂಧೆ ಕುಟುಂಬವನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ಇದು ಹಿಟ್ ಅಂಡ್ ರನ್ ಪ್ರಕರಣವಾಗಿದ್ದು, ಆಕೆಯ ಎರಡೂ ತೋಳುಗಳು, ಕಾಲುಗಳು, ತಲೆ ಮತ್ತು ಎದೆಗೆ ಗಂಭೀರ ಗಾಯಗಳಾಗಿವೆ ಎಂದು ಕುಟುಂಬ ಆರೋಪಿಸಿದೆ.
ಎರಡು ದಿನಗಳ ನಂತರ ನೀಲಂ ಅವರ ರೂಮ್ ಮೇಟ್ ಅಪಘಾತದ ಬಗ್ಗೆ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. 35 ವರ್ಷದ ಮಹಿಳೆಯನ್ನು ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದ ಸಿ ಡೇವಿಸ್ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಅಲ್ಲಿ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.