ಮುಂಬೈ: ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಸಂಗೋಲ್ ಪಟ್ಟಣದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಇವರೆಲ್ಲರೂ ಕೊಲ್ಲಾಪುರದಿಂದ ಪಂಢರಾಪುರಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದರು ಎನ್ನಲಾಗಿದೆ.
ಮುಂಬೈನಿಂದ ಸುಮಾರು 390 ಕಿಮೀ ದೂರದಲ್ಲಿರುವ ಸಂಗೋಲಾ ಪಟ್ಟಣದ ಬಳಿ ನಿನ್ನೆ ಸಂಜೆ 6.45 ರ ಸುಮಾರಿಗೆ ಅಪಘಾತ ಸಂಭವಿಸಿದೆ. 32 ಯಾತ್ರಾರ್ಥಿಗಳ ತಂಡವು ಕೊಲ್ಹಾಪುರ ಜಿಲ್ಲೆಯ ಜಥರ್ವಾಡಿಯಿಂದ ಪಂಢರಪುರದ ದೇವಸ್ಥಾನ ಪಟ್ಟಣಕ್ಕೆ ಪಾದಯಾತ್ರೆ ಮೂಲಕ ಸಾಗುತ್ತಿತ್ತು.
ಈ ಗುಂಪು ಮೂರು ದಿನಗಳ ಹಿಂದೆ ಕೊಲ್ಲಾಪುರದಿಂದ ನಡೆದುಕೊಂಡು ಹೋಗಿದ್ದು, ಸಂಗೋಳ ತಲುಪುತ್ತಿದ್ದಂತೆ, ಚಾಲಕನ ನಿಯಂತ್ರಣ ತಪ್ಪಿ ವೇಗವಾಗಿ ಬಂದ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್ಯುವಿ) ಅವರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಐವರು ಮಹಿಳೆಯರು, ಒಂದು ಮಗು ಸೇರಿ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ.
BIGG NEWS : ಇಂದಿನಿಂದಲೇ `SC-ST’ ಮೀಸಲು ಹೆಚ್ಚಳ ಸುಗ್ರೀವಾಜ್ಞೆ ಜಾರಿ
BREAKING NEWS: ಪೆಟ್ರೋಲ್, ಡೀಸೆಲ್ ದರ ಪ್ರತಿ ಲೀಟರ್ಗೆ 40 ಪೈಸೆ ಇಳಿಕೆ | Petrol, diesel to get cheaper
ಮೊರ್ಬಿ ಸೇತುವೆ ದುರಂತ: ಸೇತುವೆ ದುರಸ್ತಿ ಮಾಡಿದ ಸಂಸ್ಥೆಯ ಸಿಬ್ಬಂದಿ ಸೇರಿ 9 ಮಂದಿ ಅರೆಸ್ಟ್
BIGG NEWS : ಇಂದಿನಿಂದಲೇ `SC-ST’ ಮೀಸಲು ಹೆಚ್ಚಳ ಸುಗ್ರೀವಾಜ್ಞೆ ಜಾರಿ