ಮಹಾರಾಷ್ಟ್ರ: ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಜೀವ ಬೆದರಿಕೆ ಇರುವ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ.
ವಿದ್ಯಾರ್ಥಿ ವೇತನದ ಕುರಿತು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ |Scholarship 2022-23
ರಾಜ್ಯ ಗುಪ್ತಚರ ಇಲಾಖೆ (ಎಸ್ಐಡಿ) ಸಂಜೆ ಸಿಎಂ ಶಿಂಧೆ ಅವರ ಜೀವಕ್ಕೆ ಬೆದರಿಕೆಯ ಬಗ್ಗೆ ನಿರ್ದಿಷ್ಟ ಮಾಹಿತಿ ಪಡೆದಿದ್ದು, ರಾಜ್ಯ ಗುಪ್ತಚರ ಆಯುಕ್ತ ಅಶುತೋಷ್ ಡುಂಬ್ರೆ ಬೆದರಿಕೆಯನ್ನು ಖಚಿತಪಡಿಸಿದ್ದಾರೆ.
ನಿರ್ದಿಷ್ಟ ಮಾಹಿತಿಯ ನಂತರ, ನಾವು ಅಗತ್ಯ ಕ್ರಮ ಕೈಗೊಂಡಿದ್ದೇವೆ ಮತ್ತು ಮುಖ್ಯಮಂತ್ರಿಯ ಭದ್ರತೆಯನ್ನು ಹೆಚ್ಚಿಸಿದ್ದೇವೆ ಎಂದು ಡುಂಬ್ರೆ ಮಾಹಿತಿ ನೀಡಿದ್ದಾರೆ.
ಝಡ್ ಪ್ಲಸ್ ಕೆಟಗರಿ ಭದ್ರತೆ ಹೊಂದಿರುವ ಸಿಎಂಗೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ ಎಂದರು.
ಥಾಣೆಯಲ್ಲಿರುವ ಶಿಂಧೆ ಅವರ ಖಾಸಗಿ ನಿವಾಸ ಮತ್ತು ಮುಂಬೈನ ಅಧಿಕೃತ ನಿವಾಸ ‘ವರ್ಷಾ’ಕ್ಕೂ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು
ಅಕ್ಟೋಬರ್ 5 ರಂದು ಮುಂಬೈನ ಎಮ್ಎಮ್ಆರ್ ಡಿಎ ಮೈದಾನದಲ್ಲಿ ಶಿಂಧೆ ತಮ್ಮ ಮೊದಲ ದಸರಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
Watch video: ಮಕ್ಕಳೆದುರಲ್ಲೇ ಮದ್ಯ ಸೇವನೆ ಮಾಡ್ತಿದ್ದ ‘ಹಳ್ಳಿ ಮೇಷ್ಟ್ರು’ : ಊರಿನ ಜನ ಮಾಡಿದ್ದೇನು ಗೊತ್ತಾ?