ಮಹಾಕುಂಭದ ಸಮಯದಲ್ಲಿ ತನ್ನ ಸೌಂದರ್ಯದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದ ಮೋನಾಲಿಸಾ ಭೋಂಸ್ಲೆ ಈಗ ನಾಪತ್ತೆಯಾಗಿದ್ದಾರೆ. ತನ್ನ ಪ್ರೀತಿಯ ಪತ್ನಿಗಾಗಿ ಆಕೆಯ ಪತಿ ಈಗ ರಾಜಸ್ಥಾನದ ಅಜ್ಮೀರ್ ಮತ್ತು ಜೋಧ್ಪುರದ ಬೀದಿ ಬೀದಿಗಳಲ್ಲಿ ಅಲೆಯುತ್ತಿದ್ದಾರೆ.
ಯಾರು ಈ ಮೋನಾಲಿಸಾ?: ಕೆಲವು ವರ್ಷಗಳ ಹಿಂದೆ ಕುಂಭಮೇಳದ ಸಂದರ್ಭದಲ್ಲಿ ಮೋನಾಲಿಸಾ ಅವರ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿದ್ದವು. ಇದರಿಂದಾಗಿ ಅವರು ‘ವೈರಲ್ ಗರ್ಲ್’ ಎಂದೇ ಖ್ಯಾತಿ ಪಡೆದಿದ್ದರು.
“ಮೊನಾಲಿಸಾ ಓಡಿಹೋಗಿದ್ದಾಳೆ”: ಪತಿ ಫರ್ಮನ್ ವಿಡಿಯೋ ವೈರಲ್
ಮೊನಾಲಿಸಾ ಪತಿ ಫರ್ಮನ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ತನ್ನ ಪತ್ನಿ ನಾಪತ್ತೆಯಾಗಿರುವುದಾಗಿ ತಿಳಿಸಿದ್ದಾನೆ.
ನಾನು ಸದ್ಯ ಅಜ್ಮೀರ್ ಮತ್ತು ಪುಷ್ಕರ್ನಲ್ಲಿದ್ದೇನೆ. ಮೊನಾಲಿಸಾ ಓಡಿಹೋಗಿದ್ದಾಳೆ, ಅವಳನ್ನು ಹುಡುಕಲೆಂದೇ ನಾನು ಇಲ್ಲಿಗೆ ಬಂದಿದ್ದೇನೆ. ಆದರೆ ಇಲ್ಲಿ ಅವಳು ಪತ್ತೆಯಾಗಿಲ್ಲ, ಹಾಗಾಗಿ ಜೋಧ್ಪುರಕ್ಕೆ ಹೋಗುತ್ತಿದ್ದೇನೆ. ಯಾರಿಗಾದರೂ ಮಾಹಿತಿ ಸಿಕ್ಕರೆ ದಯವಿಟ್ಟು ತಿಳಿಸಿ” ಎಂದು ಫರ್ಮನ್ ವಿಡಿಯೋದಲ್ಲಿ ಮನವಿ ಮಾಡಿದ್ದಾನೆ.
ಇದು ಉದ್ದೇಶಪೂರ್ವಕ ಸಂಚು: ಪೋಷಕರ ಗಂಭೀರ ಆರೋಪ
ಇನ್ನೊಂದೆಡೆ, ಮೊನಾಲಿಸಾ ತಾಯಿ ಲತಾಬಾಯಿ ಮತ್ತು ತಂದೆ ಜೈಸಿಂಗ್ ಬೋಸಲೆ ಅವರು ಫರ್ಮನ್ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ಇದು ಫರ್ಮನ್ ಮಾಡಿದ ಪಿತೂರಿ. ಕಳೆದ 15-20 ದಿನಗಳ ಹಿಂದೆ ಆತ ಮಗಳೊಂದಿಗೆ ಮಾತನಾಡಿಸಿದ್ದನು, ಅದಾದ ನಂತರ ಇಬ್ಬರೂ ಫೋನ್ ಕರೆಗಳಿಗೆ ಸ್ಪಂದಿಸುತ್ತಿಲ್ಲ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಮಗಳ ನಾಪತ್ತೆಗೆ ಫರ್ಮನ್ ಅವರೇ ನೇರ ಕಾರಣ ಎಂದು ಅವರು ದೂರಿದ್ದಾರೆ.
ಕಾನೂನು ಕುಣಿಕೆ: ಫರ್ಮನ್ ವಿರುದ್ಧ ಪೋಕ್ಸೊ ಪ್ರಕರಣ
ಈ ಪ್ರಕರಣದಲ್ಲಿ ಈಗ ಹೊಸ ತಿರುವು ಲಭಿಸಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಹಸ್ತಕ್ಷೇಪದ ನಂತರ ಮೊನಾಲಿಸಾಳ ಅಸಲಿ ಜನ್ಮ ದಾಖಲೆಗಳು ಹೊರಬಂದಿವೆ.
ಅಪ್ರಾಪ್ತೆ: ದಾಖಲೆಗಳ ಪ್ರಕಾರ ಮೊನಾಲಿಸಾ ಇನ್ನೂ ಅಪ್ರಾಪ್ತೆಯಾಗಿದ್ದಾಳೆ. * ಎಫ್ಐಆರ್ ದಾಖಲು: ಅಪ್ರಾಪ್ತೆಯನ್ನು ವಿವಾಹವಾದ ಕಾರಣ ಮಹೇಶ್ವರ್ ಪೊಲೀಸ್ ಠಾಣೆಯಲ್ಲಿ ಫರ್ಮನ್ ವಿರುದ್ಧ ಕಠಿಣವಾದ ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪೋಕ್ಸೊ ಪ್ರಕರಣ ದಾಖಲಾದ ಬೆನ್ನಲ್ಲೇ ಮೊನಾಲಿಸಾ ನಾಪತ್ತೆಯಾಗಿರುವುದು ಮತ್ತು ಪತಿ ಫರ್ಮನ್ ವಿಡಿಯೋ ಬಿಡುಗಡೆ ಮಾಡಿರುವುದು ಈ ಪ್ರಕರಣವನ್ನು ಮತ್ತಷ್ಟು ನಿಗೂಢವಾಗಿಸಿದೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
.
ರಾಜಸ್ಥಾನದಲ್ಲಿ ಪತ್ತೆ ಕಾರ್ಯ: ಮೋನಾಲಿಸಾ ಅವರು ರಾಜಸ್ಥಾನದ ಅಜ್ಮೀರ್ ಅಥವಾ ಜೋಧ್ಪುರ ಭಾಗದಲ್ಲಿ ಇರುವ ಸಾಧ್ಯತೆ ಇದೆ ಎಂಬ ಸುಳಿವಿನ ಮೇರೆಗೆ ಪತಿ ಅಲ್ಲಿಗೆ ಧಾವಿಸಿದ್ದಾರೆ. ಅಲ್ಲಿನ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಪ್ರವಾಸಿ ತಾಣಗಳಲ್ಲಿ ಪತ್ನಿಯ ಫೋಟೋ ತೋರಿಸುತ್ತಾ ಎಲ್ಲರನ್ನೂ ವಿಚಾರಿಸುತ್ತಿದ್ದಾರೆ.
मोनालिसा ने थोड़ी पुछा था की में जिंदगी भर रहूंगी या नहीं 🤣😝 pic.twitter.com/sV8pf3pjSm
— 𝐒ɦυ𐓣𝗒𝗍α (@Shunyta_007) April 12, 2026








