ಶಿವಮೊಗ್ಗ : ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಿಎಂ ಕೂಗು ವಿಚಾರಕ್ಕೆ ಸಂಬಂಧ ಪಟ್ಟಂತೆ ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದು, ಚುನಾವಣೆ ಸಂದರ್ಭದಲ್ಲಿ ಮಾತ್ರ ಸಚಿವ ಡಾ. ಎಚ್ ಸಿ ಮಾದೇವಪ್ಪ ಇಂತಹ ಹೇಳಿಕೆ ನೀಡುತ್ತಾರೆ ಎಂದು ಕಿಡಿ ಕಾರಿದರು.
BREAKING :ಶಂಕಿತ ಉಗ್ರ ತುಮಕೂರಿನ ಕಡೆ ಬಂದಿರುವ ಕುರಿತು ಪೊಲೀಸರಿಗೆ ಸುಳಿವು ಸಿಕ್ಕಿದೆ : ಜಿ. ಪರಮೇಶ್ವರ್
ಶಿವಮೊಗ್ಗದಲ್ಲಿ ಮಾಜಿ ಶಾಸಕ ಕೆ ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದು, ಚುನಾವಣಾ ಸಂದರ್ಭದಲ್ಲಿ ಈ ಕೂಗು ಕೇಳಿ ಬರುತ್ತದೆ.ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಕುತಂತ್ರ ಮಾಡುತ್ತಿದೆ.ಚುನಾವಣೆ ವೇಳೆ ಮಾತ್ರ ಸಚಿವ ಡಾ. ಮಾದೇವಪ್ಪ ಈ ರೀತಿ ಹೇಳಿಕೆ ಹೇಳುತ್ತಾರೆ. ಎರಡು ದಿನದಿಂದ ಡಿಕೆ ಶಿವಕುಮಾರ್ ಬೆಂಬಲಿಗರು ಕೂಡ ಶುರು ಮಾಡಿದ್ದಾರೆ ಎಂದರು.
BREAKING : ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ : ‘BMTC’ ಬಸ್ ನಲ್ಲಿ ಪ್ರಯಾಣಿಸಿದ್ದ ಉಗ್ರನ ಮತ್ತೊಂದು ಫೋಟೋ ವೈರಲ್
ಡಿಕೆ ಶಿವಕುಮಾರ್ ಸಿಎಂ ಆಗೇ ಬಿಟ್ರೇನೋ ಎಂದು ಕೂಗು ಎಬ್ಬಿಸಿದ್ದಾರೆ. ಇದೀಗ ಮಾದೇವಪ್ಪ ದಲಿತ ಸಿಎಂ ಕೂಗು ಎಬ್ಬಿಸಿದ್ದಾರೆ. ಡಾ. ಪರಮೇಶ್ವರರನ್ನು ಸಿಎಂ ಮಾಡುತ್ತೇವೆ ಅಂದರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಬೆಂಬಲಿಗರು ಮುಂದೆ ಬರುತ್ತಾಾರಾ? ಎಂದು ಪ್ರಶ್ನಿಸಿದರು.ಗುಂಪುಗಾರಿಕೆಯಿಂದ ದಲಿತ ಸಿಎಂ ಮುಂದೆ ತರುತ್ತಿದ್ದಾರೆ. ಇದು ರಾಜ್ಯದ ದಲಿತರಿಗೆ ಮಾಡುತ್ತಿರುವ ಮೋಸವಾಗಿದೆ.ಜಾತಿ ರಾಜಕಾರಣ ಬಿಡಿ ಎಂದು ಕೆ ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
BREAKING : ತುಮಕೂರಲ್ಲಿ ಅಪ್ರಾಪ್ತೆ ಬಾಲಕಿಯ ಮೇಲೆ ‘ಸಾಮೂಹಿಕ ಅತ್ಯಾಚಾರ’ : ಮೂವರ ಬಂಧನ