ರಾಮನಗರ : ರಾಮಮಂದಿರ ಪೂರ್ಣ ಪ್ರಮಾಣದಲ್ಲಿ ನಿರ್ಮಾಣ ಆಗಿಲ್ಲ ಆದರೂ ರಾಜಕೀಯಕ್ಕೋಸ್ಕರ ಉದ್ಘಾಟನೆ ಮಾಡುತ್ತಿದ್ದಾರೆ ಇಂತಹ ರಾಜಕೀಯ ಕಾರ್ಯಕ್ರಮಕ್ಕೆ ನಾವು ಹೋಗಬೇಕಾ? ಎಂದು ರಾಮನಗರ ಜಿಲ್ಲೆ, ಮಾಗಡಿಯಲ್ಲಿ ಶಾಸಕ ಬಾಲಕೃಷ್ಣ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅವರು ಮನೆ ಮನೆಗೆ ಮಂತ್ರಾಕ್ಷತೆ ಕೊಡುತ್ತಿದ್ದಾರೆ. ನಾವು ಗೃಹಲಕ್ಷ್ಮಿ ಯೋಜನೆ ಅಡಿ 2,000 ಕೊಡುತ್ತಿದ್ದೇವೆ.ಯಾರಿಗೆ ಮತ ಹಾಕಬೇಕೆಂದು ಜನ ತೀರ್ಮಾನಿಸುತ್ತಾರೆ. ಹೀಗಾಗಿ ಜನರು ಮತವನ್ನು ಮಂತ್ರಾಕ್ಷತೆಗಾ ಅಥವಾ 2000 ಕೊಟ್ಟವರೇಗಾ ಯಾರಿಗೆ ಮತ ಹಾಕಬೇಕೆಂದು ಜನರು ಈ ಕುರಿತು ತೀರ್ಮಾನಿಸುತ್ತಾರೆ.ಮಾಗಡಿಯಲ್ಲಿ ಕೈ ಶಾಸಕ ಹೆಚ್ಚಿಸಿ ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ.
ರಾಮಮಂದಿರ ಕಟ್ಟಲು ನಾವು ಜಾಗ ಹುಡುಕುತ್ತಿದ್ದೇವೆ ಒಂದೆರಡು ಅಲ್ಲ 20 ರಿಂದ 25 ಎಕರೆ ಜಾಗದಲ್ಲಿ ಮಂದಿರ ಕಟ್ಟುತ್ತೇವೆ ರಾಮಮಂದಿರ ಅದ್ದೂರಿಯಾಗಿ ನಿರ್ವಹಣಾ ಮಾಡುತ್ತೇವೆ. ರಾಮ ಮಂದಿರ ಬಿಜೆಪಿ ಕಾಂಗ್ರೆಸ್ ಸ್ವತ್ತಲ್ಲ. ರಾಮಮಂದಿರ ಈ ಸಮಾಜದ ಸ್ವತ್ತು ಎಂದು ತಿಳಿಸಿದರು.
ನಾವು ರಾಮಮಂದಿರ ಬಗ್ಗೆ ಚರ್ಚೆ ಮಾಡಲ್ಲ. ಮಂದಿರ ಕಟ್ಟಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಜಿಲ್ಲಾಧಿಕಾರಿ ಸಂಸದರು ಇದರ ಬಗ್ಗೆ ಚರ್ಚಿಸುತ್ತಿದ್ದಾರೆ ಹೆಚ್ಚು ಚರ್ಚೆ ಮಾಡಲಿ ರಾಮಮಂದಿರದನ್ನು ನಿರ್ಮಿಸುತ್ತೇವೆ. ಇಲ್ಲದಿದ್ದರೆ ಮಂದಿರ ಕಟ್ಟಿದ್ದೇವೆ ಎಂದು ಗೆದ್ದು ಬಿಡುತ್ತಾರೆ. ಕೆಲಸ ಮಾಡದೆ ಮತ ಹಾಕಿಸಿಕೊಂಡು ಗೆದ್ದು ಬಿಡ್ತಾರೆ ಎಂದು ಬಿಜೆಪಿ ವಿರುದ್ಧ ಶಾಸಕ ಎಚ್ ಸಿ ಬಾಲಕೃಷ್ಣ ವಾಗ್ದಾಳಿ ನಡೆಸಿದರು.
ಈಗ ಒಂದು ಕಟ್ಟಡ ಪೂರ್ಣ ಆಗಿಲ್ಲ ಅಥವಾ ಮನೆ ಪೂರ್ಣ ಆಗಿಲ್ಲ ಅಂದ್ರೆ ಗೃಹಪ್ರವೇಶ ಮಾಡುತ್ತೇವೆ ಅದೇ ರೀತಿಯಾಗಿ ದೇವಸ್ಥಾನ ಅಪೂರ್ಣ ಆಗಿಲ್ಲ ಹೀಗಾಗಿ ಇದಕ್ಕಿಂತ ಮುಂಚೇನೆ ಶ್ರೀರಾಮನನ್ನು ಪ್ರತಿಷ್ಠಾಪನೆ ಮಾಡುತ್ತಾರೆ ಎಂದು ಹೊರಟಿರುವುದು ನೋಡಿದರೆ ಇದು ಕೇವಲ ರಾಜಕೀಯ ಗಿಮಿಕ್ ಆಗಿದೆ. ಲೋಕಸಭೆ ಚುನಾವಣೆ ಇರುವುದರಿಂದ ಈ ರೀತಿಯ ಗಿಮಿಕ್ ಮಾಡುತ್ತಿದ್ದಾರೆ ವಾಗ್ದಾಳಿ ನಡೆಸಿದರು.