ಜೈಪುರ: ಮಧ್ಯಪ್ರದೇಶದ ಯುವತಿಯೊಬ್ಬಳು ರಾಜಸ್ಥಾನದ ನಗೌರ್ನಲ್ಲಿರುವ ತನ್ನ ಸ್ನೇಹಿತೆಯ ಮನೆಗೆ ಹೋಗಿ ಆಕೆಗೆ ನೀನು ನನನ್ನು ಮದುವೆಯಾಗು ಎಂದು ಹೇಳಿ ಗಲಾಟೆ ಸೃಷ್ಟಿಸಿದ್ದು, ಇದೀಗ ಯುವತಿಯನ್ನು ಬಂಧಿಸಲಾಗಿದೆ.
21 ರಿಂದ 25 ವರ್ಷ ವಯಸ್ಸಿನ ಆಸುಪಾಸಿನ ಇಬ್ಬರು ಯುವತಿಯರಿಗೆ ಒಂದೆರಡು ವರ್ಷಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಪರಿಚಯವಾಯ್ತು. ನಂತ್ರ ಹೀಗೆ ಸ್ನೇಹ ಮುಂದುವರೆಯಿತು. ಮಧ್ಯಪ್ರದೇಶದ ಯುವತಿ ತನ್ನ ಸ್ನೇಹಿತೆಯನ್ನು ಮದುವೆಯಾಗಲು ಬಯಸಿದ್ದಳು ಮತ್ತು ಅವಳೊಂದಿಗೆ ದೈಹಿಕ ಸಂಬಂಧವನ್ನೂ ಬಯಸಿದ್ದಳು. ಅಲ್ಲದೆ ₹ 10 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದಳು. ಬೇಡಿಕೆಗಳನ್ನು ಸ್ವೀಕರಿಸದಿದ್ದರೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಚಾಟ್ಗಳನ್ನು ಸೋರಿಕೆ ಮಾಡುವುದಾಗಿ ರಾಜಸ್ಥಾನ ಯುವತಿಗೆ ಬೆದರಿಕೆ ಹಾಕಿದ್ದಾಳೆ.
“ಮಧ್ಯಪ್ರದೇಶದ ಯುವತಿ ಶನಿವಾರ ರಾತ್ರಿ ನಾಗೌರ್ನ ಲಾಡ್ನೂನ್ನಲ್ಲಿರುವ ತನ್ನ ಸ್ನೇಹಿತೆನ ಮನೆಗೆ ಹೋಗಿದ್ದು, ನೀನು ನನ್ನೊಂದಿಗೆ ಮದುವೆಯಾಗಬೇಕೆಂದು ಹಠ ಹಿಡಿದು ಕುಳಿತಿದ್ದಳು. ಇದನ್ನು ಕಂಡ ಕುಟುಂಬ ಸದಸ್ಯರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಇದೀಗ ಮಧ್ಯಪ್ರದೇಶದ ಯುವತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಂತ್ರಿಕ ದೋಷ: ಪುಣೆಯಿಂದ ಬೆಂಗಳೂರಿಗೆ ಹೊರಟಿದ್ದ ಏರ್ಏಷ್ಯಾ ಇಂಡಿಯಾ ವಿಮಾನ ಕೊಲ್ಲಿಗೆ ವಾಪಸ್
Brain Aging Signs ; ಗಮನಿಸಿ ; 30 ವರ್ಷದ ನಂತ್ರ ನಿಮ್ಮ ‘ಮೆದುಳಿಗೂ’ ವಯಸ್ಸಾಗುತ್ತೆ, ಈ ‘ಚಿಹ್ನೆ’ಗಳು ಅದರ ಸಂಕೇತ
ʻಭಾರತ್ ಜೋಡೋ ಯಾತ್ರೆʼಗೆ ಒಂದು ದಿನ ಬ್ರೇಕ್: ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ರಾಹುಲ್ ಹಿಮಾಚಲಕ್ಕೆ ಭೇಟಿ
ತಾಂತ್ರಿಕ ದೋಷ: ಪುಣೆಯಿಂದ ಬೆಂಗಳೂರಿಗೆ ಹೊರಟಿದ್ದ ಏರ್ಏಷ್ಯಾ ಇಂಡಿಯಾ ವಿಮಾನ ಕೊಲ್ಲಿಗೆ ವಾಪಸ್