ಮಧ್ಯಪ್ರದೇಶ: ಭಾರತೀಯ ಪುರಾತತ್ವ ಇಲಾಖೆಯ ತಂಡವು ಮಧ್ಯಪ್ರದೇಶದ ಧಾರ್ ಜಿಲ್ಲೆಯ ವಿವಾದಿತ ಭೋಜಶಾಲ-ಕಮಲ್ ಮೌಲಾ ಮಸೀದಿ ಸಂಕೀರ್ಣದ ಸಮೀಕ್ಷೆ ಪ್ರಾರಂಭಿಸಿದೆ.ಭೋಜಶಾಲದಲ್ಲಿ ಸಮೀಕ್ಷೆ ಆರಂಭವಾಗಿದೆ. ಸಮೀಕ್ಷೆ ನಡೆಸಲು ಪುರಾತತ್ವ ಇಲಾಖೆಗೆ ಬೇಕಾದ ಎಲ್ಲಾ ಸಹಕಾರವನ್ನು ನಾವು ನೀಡಿದ್ದೇವೆ. ಸ್ಥಳದಲ್ಲಿ ಶಾಂತಿ ಭಂಗವಾಗದಂತೆ ಅಗತ್ಯ ಭದ್ರತೆಯನ್ನೂ ಕಲ್ಪಿಸಲಾಗಿದೆ ಎಂದು ಧಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಸಿಂಗ್ ತಿಳಿಸಿದರು.
ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಬಂಧನದ ಬಗ್ಗೆ ‘ಅಣ್ಣಾ ಹಜಾರೆ’ ಪ್ರತಿಕ್ರಿಯೆ | Watch Video
ಮಧ್ಯಯುಗದ ಈ ಸ್ಮಾರಕವು ವಾಗ್ದೇವಿಯ (ಸರಸ್ವತಿ) ದೇಗುಲ ಎಂದು ಹಿಂದೂಗಳು ನಂಬಿದರೆ, ಮುಸಲ್ಮಾನರು ಇದನ್ನು ಕಮಲ್ ಮೌಲಾ ಮಸೀದಿ ಎಂದು ಕರೆಯುತ್ತಾರೆ.ಸಂಕೀರ್ಣದಲ್ಲಿ ಪ್ರತಿ ಮಂಗಳವಾರ ಪೂಜೆ ಸಲ್ಲಿಸಲು ಹಿಂದೂಗಳಿಗೂ, ಪ್ರತಿ ಶುಕ್ರವಾರ ನಮಾಜ್ ನಿರ್ವಹಿಸಲು ಮುಸಲ್ಮಾನರಿಗೂ ಅವಕಾಶ ನೀಡಿ 2003ರ ಏಪ್ರಿಲ್ 7ರಂದು ಪುರಾತತ್ವ ಇಲಾಖೆ ಆದೇಶಿಸಿತ್ತು
‘JDS ಪಕ್ಷ’ಕ್ಕೆ ಮರಿತಿಬ್ಬೇಗೌಡ, ಅಪ್ಪಾಜಿಗೌಡ, ಎಂ.ಶ್ರೀನಿವಾಸ್ ಗುಡ್ ಬೈ: ‘ಕಾಂಗ್ರೆಸ್’ ಸೇರ್ಪಡೆ
12ಕ್ಕೂ ಅಧಿಕ ಮಂದಿಯ ಪುರಾತತ್ವ ಇಲಾಖೆಯ ತಂಡವು ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿತು. ಸ್ಥಳೀಯ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಅವರಿಗೆ ಸಾಥ್ ನೀಡಿದರು.ಆರು ವಾರದೊಳಗೆ ಭೋಜಶಾಲ ಅವರಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು ಎಂದು ಮಾರ್ಚ್ 11ರಂದು ಮಧ್ಯ ಪ್ರದೇಶ ಹೈಕೋರ್ಟ್ ಆದೇಶಿಸಿತ್ತು.